#MeToo: ಬಹಿರಂಗ ಕ್ಷಮೆಗೆ ಅರ್ಜುನ್ ಸರ್ಜಾ ಪಟ್ಟು, ಶ್ರುತಿ ಹರಿಹರನ್ ನಕಾರ

ಸ್ಯಾಂಡಲ್ ವುಡ್ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿಯಲ್ಲಿ ಇಂದು ನಡೆದ ಸಭೆಯಲ್ಲಿ ನಟ ಅರ್ಜುನ್ ಸರ್ಜಾ ಅವರಿಗೆ ಬಹಿರಂಗ ಕ್ಷಮೆ ಕೇಳಲು ಶ್ರುತಿ ಹರಿಹರನ್ ನಕಾರ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಸ್ಯಾಂಡಲ್ ವುಡ್ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿಯಲ್ಲಿ ಇಂದು ನಡೆದ ಸಭೆಯಲ್ಲಿ ನಟ ಅರ್ಜುನ್ ಸರ್ಜಾ ಅವರಿಗೆ ಬಹಿರಂಗ ಕ್ಷಮೆ ಕೇಳಲು ಶ್ರುತಿ ಹರಿಹರನ್ ನಕಾರ ವ್ಯಕ್ತಪಡಿಸಿದ್ದಾರೆ.
ಹಿರಿಯ ನಟ ಅಂಬರೀಶ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ನಟಿ ಶ್ರುತಿ ಹಾಗೂ ನಟ ಅರ್ಜುನ್ ಸರ್ಜಾ ತಮ್ಮ ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಈ ವೇಳೆ ನಟಿ ಶ್ರುತಿ ತಮ್ಮ ಆರೋಪಕ್ಕೆ ತಾವು ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಒಂದು ಪ್ರಕರಣ ಕೋರ್ಟ್ ಮೆಟ್ಟಿಲೇರಿದರೆ ನಾನೂ ಕೂಡ ಕೋರ್ಟ್ ನಲ್ಲಿಯೇ ನನ್ನ ಬಳಿ ಇರುವ ಸಾಕ್ಷ್ಯಾಧ್ಯಾರಗಳನ್ನು ಸಲ್ಲಿಕೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬಳಿಕ ಅರ್ಜುನ್ ಸರ್ಜಾ ಅವರು ಮಾತನಾಡಿದ್ದು, ಈ ವೇಳೆ ಶ್ರುತಿ ಅವರ ಆರೋಪದಲ್ಲಿ ಹುರುಳಿಲ್ಲ. ಇದು ಖಂಡಿತಾ ಷಡ್ಯಂತ್ರವಾಗಿದ್ದು, ಶ್ರುತಿ ಆರೋಪದಿಂದಾಗಿ ತಮ್ಮ ವರ್ಚಸ್ಸಿಗೆ ಧಕ್ಕೆಯಾಗಿದೆ. ನಾನು ಚಿತ್ರರಂಗದಲ್ಲಿ 40 ವರ್ಷಗಳಿಂದ ಶ್ರಮಿಸುತ್ತಿದ್ದೇನೆ. ಕಳೆದ 40 ವರ್ಷಗಳಿಂದ ನನ್ನ ವಿರುದ್ಧ ಇಂತಹ ಆರೋಪ ಕೇಳಿಬಂದಿಲ್ಲ. ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೀಗಿರುವಾಗ ನನ್ನಿಂದ ಇಂತಹ ಕೃತ್ಯ ಸಾಧ್ಯವೇ ಇಲ್ಲ. ಶ್ರುತಿ ಕೂಡಲೇ  ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಮಾನನಷ್ಟ ಮೊಕದ್ದಮೆ ಮೂಲಕ ಕೋರ್ಟ್ ನಲ್ಲೇ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com