ಬೆಂಗಳೂರು: ಕನ್ನಡ ಪರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ನ.3ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸನ್ನಿ ಲಿಯೋನ್ ಅನುಮತಿ ಸಿಕ್ಕಿದೆ ಎಂದು ಪೊಲೀಸ್ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.,
ಸನ್ನಿ ಲಿಯೋನ್ ಭಾಗವಹಿಸುವ ಕಾರ್ಯಕ್ರಮಕ್ಕೆ ಅನುಮತಿ ಸಿಕ್ಕಿದೆ. ಕಾರ್ಯಕ್ರಮದ ಟಿಕೆಟ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಭದ್ರತೆ ಒದಗಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತ ಮದ್ಯ ಮಾರಾಟವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಅಂದು ನಡೆಯುವ ಕಾರ್ಯಕ್ರಮಗಳನ್ನು ಪರಿಶೀಲನೆಗೆ ಒಳಪಡಿಸಲಿದ್ದೇವೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಕಮಿಷನ್ರ್ ಸೀಮಂತ್ಕುಮಾರ್ಸಿಂಗ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್ ಆಗಮಿಸುವುದನ್ನು ಕನ್ನಡ ಪರ ಕೆಲ ಸಂಘಟನೆಗಳು ವಿರೋಧಿಸಿದ್ದವು. ಸನ್ನಿ ಅಶ್ಲೀಲತೆಯನ್ನು ಸಂಕೇತಿಸುತ್ತಾರೆ ಎಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಸನ್ನಿ ಲಿಯೋನ್ಗೆ ಪೊಲೀಸರು ಅನುಮತಿ ನಿರಾಕರಿಸಬಹುದಾದ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು.
ಸನ್ನಿ ಲಿಯೋನ್ ಈ ರೀತಿಯ ಸಮಸ್ಯೆ ಎದುರಿಸುತ್ತಿರುವುದು ಇದೇನು ಮೊಗಲ ಬಾರಿಯಲ್ಲ, ಈ ಹಿಂದೆಯೂ ಕೂಡ ಹಲವು ಸಂಘಟನೆಗಳು ಸನ್ನಿ ಲಿಯೋನ್ ಆಗಮನಕ್ಕೆ ವಿರೋಧ ವ್ಯಕ್ತ ಪಡಿಸಿದ್ದವು.
ಕಳೆದ ವರ್ಷ ಹೊಸ ವರ್ಷದ ದಿನ ಬೆಂಗಳೂರಿಗೆ ಆಗಮಿಸಬೇಕಿದ್ದ ಸನ್ನಿ ಲಿಯೋನ್ ವಿರುದ್ಧ ಕನ್ನಡ ಪರ ಸಂಘಟನೆಗಳು ಪ್ರತಿಭಟಿಸಿದ್ದವು. ಹೀಗಾಗಿ ಸನ್ನಿ ಬೆಂಗಳೂರು ಭೇಟಿ ರದ್ದು ಪಡಿಸಲಾಗಿತ್ತು.