'ಐ ಲವ್ ಯೂ' ತೆಲುಗು ಆವೃತ್ತಿ ವಿತರಣೆ ಹಕ್ಕು ಮೂವರು ನಿರ್ಮಾಪಕರ ಪಾಲು!

ನಟ, ನಿರ್ದೇಶಕ ಉಪೇಂದ್ರ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ ಐ ಲವ್ ಯೂ ತೆಲುಗಿನಲ್ಲಿ ಕೂಡ ಸದ್ದು ...
ರಚಿತಾ ರಾಮ್ ಮತ್ತು ಉಪೇಂದ್ರ
ರಚಿತಾ ರಾಮ್ ಮತ್ತು ಉಪೇಂದ್ರ
ನಟ, ನಿರ್ದೇಶಕ ಉಪೇಂದ್ರ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ ಐ ಲವ್ ಯೂ ತೆಲುಗಿನಲ್ಲಿ ಕೂಡ ಸದ್ದು ಮಾಡುತ್ತಿದೆ. ತೆಲುಗಿನಲ್ಲಿ ಚಿತ್ರದ ವಿತರಣೆ ಹಕ್ಕನ್ನು ಮೂವರು ನಿರ್ಮಾಪಕರು ಕೈಗೆತ್ತಿಕೊಂಡಿದ್ದಾರೆ.
ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣಗೊಂಡಿರುವ ಐ ಲವ್ ಯೂ ಚಿತ್ರ ದೇಶಾದ್ಯಂತ 600ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಜೂನ್ 14ರಂದು ತೆರೆಗೆ ಬರಲಿದೆ. ಲಂಚೊ ಶ್ರೀಧರ್, ದಿಲ್ರಾಜು ಮತ್ತು ರಾಜೇಶ್ ದಸರಿ ಚಿತ್ರದ ವಿತರಣೆ ಹಕ್ಕನ್ನು ಪಡೆದಿದ್ದಾರೆ.
ತೆಲುಗು ಭಾಷೆಯ ಚಿತ್ರದ ಆಡಿಯೊ ಜೂನ್ 8ಕ್ಕೆ ಬಿಡುಗಡೆಯಾಗಲಿದೆ. ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗಿದ್ದು ನಿನ್ನೆ ನಟ ಸುದೀಪ್ ಚಿತ್ರದ ಟ್ರೈಲರ್ ಮತ್ತು ಪೀಠಿಕೆ ಹಾಡನ್ನು ಬಿಡುಗಡೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com