ಯಶ್ ಮನದನ್ನೆ ರಾಧಿಕೆಗೆ ಸೀಮಂತ ಸಂಭ್ರಮ

ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಇತ್ತೀಚೆಗೆ ಸೀಮಂತ ಆಚರಿಸಿಕೊಂಡಿದ್ದಾರೆ.
ರಾಧಿಕಾ ಪಂಡಿತ್
ರಾಧಿಕಾ ಪಂಡಿತ್
Updated on

ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಇತ್ತೀಚೆಗೆ ಸೀಮಂತ ಆಚರಿಸಿಕೊಂಡಿದ್ದಾರೆ.

ಮೊದಲ ಮಗು ತೊದಲು ನುಡಿಯುತ್ತಿರುವಾಗಲೇ ಮತ್ತೊಂದು ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ರಾಧಿಕಾಗೆ ಸ್ನೇಹಿತೆಯರು, ಕುಟುಂಬ ವರ್ಗದವರು ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೀಮಂತ ಶಾಸ್ತ್ರದ ಭಾವಚಿತ್ರವನ್ನು ರಾಕ್ ಸ್ಟಾರ್ ಮುದ್ದಿನ ಮಡದಿ ಹಂಚಿಕೊಂಡಿದ್ದಾರೆ. ಗೆಳತಿಯರೆಲ್ಲ ಸೇರಿ ಬೇಬಿ ಶವರ್ ಮಾಡಿದ್ದನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿ ಖುಷಿಪಟ್ಟಿದ್ದಾರೆ.

ರಾಧಿಕಾ ಪಂಡಿತ್ ಸ್ನೇಹಿತರು ರಾಧಿಕಾಗೆ ಸೀಮಂತ ಶಾಸ್ತ್ರವನ್ನು ಮಾಡಿದ್ದಾರೆ. ಈ ಬಗ್ಗೆ ರಾಧಿಕಾ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ನನ್ನ ಸ್ನೇಹಿತರು ನನಗೆ ಅದ್ಭುತವಾದ ಬೇಬಿ ಶವರ್ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಇನ್ನು ಹೆಚ್ಚಿನ ಫೋಟೋಗಳು ಸಧ್ಯದಲ್ಲೇ ಹಂಚಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ. ಇದು ಸ್ನೇಹಿತರು ಮಾಡಿರುವ ಸೀಮಂತ ಕಾರ್ಯಕ್ರಮ. 

ಕಳೆದ ವರ್ಷ ಡಿಸೆಂಬರ್ ನಲ್ಲಿ ರಾಧಿಕಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಯಶ್ ದಂಪತಿ ಮುದ್ದು ಮಗಳಿಗೆ 'ಆಯಿರಾ' ಎಂದು ನಾಮಕರಣ ಮಾಡಿದ್ದರು. ಆಯಿರಾ ಈಗ 10 ತಿಂಗಳ ಮಗು. ಒಂದು ವರ್ಷ ತುಂಬಲು ಇನ್ನು ಎರಡು ತಿಂಗಳು ಬಾಕಿ ಇದೆ. ಅಷ್ಟರಲ್ಲೆ ರಾಧಿಕಾ ಎರಡನೆ ಮಗುವಿಗೆ ಜನ್ಮ ನೀಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com