ಒಂದೇ ಚಿತ್ರದಲ್ಲಿ ಪುನೀತ್, ಜಗ್ಗೇಶ್ ಅಭಿನಯಿಸಲು ಉತ್ಸುಕ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಶೀಘ್ರದಲ್ಲಿಯೇ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ವೇಳೆಯಲ್ಲಿ ಪುನೀತ್ ರಾಜ್ ಕುಮಾರ್ ಅವರೇ ಈ ವಿಷಯವನ್ನು ತಿಳಿಸಿದ್ದಾರೆ.
ಪುನೀತ್ ರಾಜ್ ಕುಮಾರ್ , ಜಗ್ಗೇಶ್
ಪುನೀತ್ ರಾಜ್ ಕುಮಾರ್ , ಜಗ್ಗೇಶ್
Updated on: 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಶೀಘ್ರದಲ್ಲಿಯೇ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ವೇಳೆಯಲ್ಲಿ ಪುನೀತ್ ರಾಜ್ ಕುಮಾರ್ ಅವರೇ ಈ ವಿಷಯವನ್ನು ತಿಳಿಸಿದ್ದಾರೆ.

ಶನಿವಾರ ಹಾಟ್ ಸೀಟ್ ನಲ್ಲಿ ಹಿರಿಯ ನಾಯಕ ಜಗ್ಗೇಶ್ ಕುಳಿತಿದ್ದರು. ಆಗ ಈ ಇಬ್ಬರು ನಾಯಕರು ಪ್ರೇಕ್ಷಕರ ಮುಂದೆ  ಕೆಲಸಗಳ ಬಗ್ಗೆ ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿದರು.

ಜಗ್ಗೇಶ್ ಅವರ ದೊಡ್ಡ ಅಭಿಮಾನಿ. ಅವರ ಎಲ್ಲ ಚಿತ್ರಗಳನ್ನು ನೋಡುತ್ತಿದ್ದೆ. ಕೆಲವೊಂದು ಚಿತ್ರಗಳನ್ನು ಪದೇ ಪದೇ ನೋಡಿದ್ದೇನೆ ಎಂದು ಪುನೀತ್ ರಾಜ್ ಕುಮಾರ್ ಹೇಳಿದರು. ಜಗ್ಗೇಶ್ ಅವರ ಐತಲಾಕಡಿ ಪಕಡಿ ಜಮ್ಮು ಸಂಭಾಷಣೆ ಹೇಳುವಂತೆ ಪುನೀತ್ ಹಾಗೂ ಪ್ರೇಕ್ಷಕರು ಜಗ್ಗೇಶ್ ಅವರನ್ನು ಒತ್ತಾಯಿಸಿದರು. 

ಪುನೀತ್ ರಾಜ್ ಕುಮಾರ್ ಹಾಗೂ ಡಾ. ರಾಜ್ ಕುಮಾರ್ ಅವರ ಬಗ್ಗೆ ಜಗ್ಗೇಶ್ ಕೆಲವೊಂದು ವಿಚಾರ ಹಂಚಿಕೊಂಡರು. ಇಬ್ಬರು ಒಟ್ಟಿಗೆ ಅಭಿಯನಸುವಂತಹ ಕಥೆಯೊಂದನ್ನು ನಿರ್ದೇಶಕರು ಹೇಳಿರುವುದಾಗಿ ತಿಳಿಸಿದರು. 

ರಿಯಾಲಿಟಿ ಶೋ ಹೊರತುಪಡಿಸಿದಂತೆ  ಸದ್ಯ ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಬ್ಯೂಸಿಯಾಗಿದ್ದಾರೆ. ಹೊಂಬಾಳೆ ಫಿಲ್ಮಂ ಬ್ಯಾನರ್ ಅಡಿಯಲ್ಲಿ  ಸಂತೋಷ್ ಆನಂದ್ ರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮತ್ತೊಂದೆಡೆ ವಿಜಯ ಪ್ರಸಾದ್ ನಿರ್ದೇಶನದ ತಿರುಪತಿ ಚಿತ್ರದಲ್ಲಿ ಜಗ್ಗೇಶ್ ಅಭಿನಯಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com