ಟಾಲಿವುಡ್ ನಲ್ಲೂ 'ಪೊಗರು' ಹವಾ: ಖರಾಬು: ಹಾಡಿನ ತೆಲುಗು ವರ್ಷನ್ ಆಗಸ್ಟ್ 6ಕ್ಕೆ ರಿಲೀಸ್

ನಟ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರ ಇದೀಗ ಟಾಲಿವುಡ್ ನಲ್ಲೂ ಹವಾ ಎಬ್ಬಿಸುತ್ತಿದ್ದು, ಈಗಾಗಲೇ ಬಿಡುಗಡೆಗೂ ಮುನ್ನವೇ ಪೊಗಲು ಭಾರೀ ಸದ್ದು ಮಾಡಿದೆ. ಬಿಡುಗಡೆಯಾಗಿರುವ ಹಾಡೊಂಂದನ್ನು 9 ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ಖರಾಬು ಚಿತ್ರದ ಗೀತೆಯಲ್ಲಿ ಕಾಣಿಸಿಕೊಂಡಿರುವ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ
ಖರಾಬು ಚಿತ್ರದ ಗೀತೆಯಲ್ಲಿ ಕಾಣಿಸಿಕೊಂಡಿರುವ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ

ನಟ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರ ಇದೀಗ ಟಾಲಿವುಡ್ ನಲ್ಲೂ ಹವಾ ಎಬ್ಬಿಸುತ್ತಿದ್ದು, ಈಗಾಗಲೇ ಬಿಡುಗಡೆಗೂ ಮುನ್ನವೇ ಪೊಗಲು ಭಾರೀ ಸದ್ದು ಮಾಡಿದೆ. ಬಿಡುಗಡೆಯಾಗಿರುವ ಹಾಡೊಂಂದನ್ನು 9 ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಇದೀಗ ಚಿತ್ರದ ಮತ್ತೊಂದು ಹಾಡು ಟಾಲಿವುಡ್ ನಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ. 

ಪರಭಾಷೆಯಲ್ಲಿ ತೆರೆ ಕಾರಣಲು ಸಿದ್ಧವಾಗಿರುವ ಪೊಗಲು ಚಿತ್ರದ ಖರಾಬು ಹಾಡು ಕನ್ನಡದಲ್ಲಿ ಹಿಟ್ ಆಗಿದೆ. ಇದೀಗ ಈ ಹಾಡಿನ ತೆಲುಗು ವರ್ಷನ್ ಆಗಸ್ಟ್ 6ರಂದು ಟಾಲಿವುಡ್ ನಲ್ಲಿ ಬಿಡುಗಡೆಯಾಗಲಿದೆ. 

ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿಯವರು ಈ ಹಾಡಿನ ಸಾಹಿತ್ಯ ಬರೆದಿದ್ದು, ಸಂಗೀತವನ್ನೂ ಸಂಯೋಜಿಸಿದ್ದಾರೆ. ಈಗಾಗಲೇ ಈ ಹಾಡು ಕನ್ನಡದಲ್ಲಿ ದೊಡ್ಡ ಹಿಟ್ ಕಂಡಿದ್ದು, ತೆಲುಗಿನಲ್ಲಿ ಬಿಡುಗಡೆಯಾಗಲಿರುವ ಈ ಹಾಡು ಯಾವ ರೀತಿ ಮೂಡಿಬರಲಿದೆ ಎಂಬುದರ ಕುರಿತು ಸಿನಿಪ್ರಿಯರಲ್ಲಿ ನಿರೀಕ್ಷೆ ಹುಟ್ಟಿಸಿದೆ. ತೆಲುಗು ವರ್ಷನ್'ನ ಖರಾಬು ಹಾಡನ್ನು ಅನುರಾಗ್ ಸಿಂಗ್ ಅವರು ಹಾಡಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com