ಗಡಿಯಾರ ನಿರ್ದೇಶಕರಿಂದ "ಹೊಸದಿಗಂತ" ಸಿನಿಮಾ

"ಗಡಿಯಾರ" ಚಿತ್ರದ ಮೂಲಕ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ನಿರ್ದೇಶಕ ಪ್ರಬಿಕ್ ಮೊಗವೀರ್ ಈಗ ಹೊಸ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ.
ಹೊಸ ದಿಗಂತ ಕನ್ನಡ ಚಿತ್ರ
ಹೊಸ ದಿಗಂತ ಕನ್ನಡ ಚಿತ್ರ
Updated on

ಬೆಂಗಳೂರು: "ಗಡಿಯಾರ" ಚಿತ್ರದ ಮೂಲಕ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ನಿರ್ದೇಶಕ ಪ್ರಬಿಕ್ ಮೊಗವೀರ್ ಈಗ ಹೊಸ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ.

ಕೊರೊನಾ ಅತಿಯಾದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದರೂ "ಗಡಿಯಾರ" ಚಿತ್ರ ವಿಭಿನ್ನ ಕಥಾಹಂದರದ ಮೂಲಕ ಗುರುತಿಸಿಕೊಂಡಿತ್ತು. "ಹೊಸದಿಗಂತ" ಸಿನಿಮಾ ಮನುಷ್ಯನ ಮಿದುಳಿನ ಮೇಲೆ ಹೆಣೆಯಲಾದ ಸಿನಿಮಾ. "ಸಮ್ ಥಿಂಗ್ ಅನೇಬಲ್ ಟು ಎಕ್ಸ್‌ಪ್ಲೇನ್’ ಎನ್ನುವ ವಾಕ್ಯ ಹೊಂದಿರುವ "ಪೋಸ್ಟರ್’ ಅನ್ನು  ಕೂಡ ಸಿನಿಮಾ ತಂಡ ಬಿಡುಗಡೆ ಮಾಡಿದೆ.

ಕಥೆ, ಚಿತ್ರಕಥೆ, ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಪ್ರಬಿಕ್ ಮೊಗವೀರ್ ಅವರದ್ದು.

"ಗಡಿಯಾರಕ್ಕಿಂತ ಈ ಸಿನಿಮಾ ವಿಭಿನ್ನವಾಗಿ ಇರಲಿದೆ. ಸಾಮಾಜಿಕ ಸಂದೇಶ ಇರುವ ಮನರಂಜನೆ ಚಿತ್ರ ಇದಾಗಲಿದೆ. ನಂಬಲು ಅಸಾಧ್ಯವಾದ ತನಿಖಾ ವರದಿಯನ್ನು ಮುಂದಿಡುವುದು ಕಥೆಯ ಮುಖ್ಯ ಉದ್ದೇಶ. ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ಇದು ಕೂಡ ಬಹು ತಾರಾಗಣದ ಸಿನಿಮಾ. ನಟ. ನಟಿಯರ  ಆಯ್ಕೆ ನಡೆಯುತ್ತಿದೆ" ಎಂದು ನಿರ್ದೇಶಕ ಪ್ರಬಿಕ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com