ಗರುಡ ಗಮನ ಋಷಭ ವಾಹನ ಸಿನಿಮಾದ ನನ್ನ ಪಾತ್ರ ನೋಡಿ ಪ್ರೇಕ್ಷಕರು ಸರ್ ಪ್ರೈಸ್ ಆಗುವುದು ಖಂಡಿತ: ರಿಷಬ್ ಶೆಟ್ಟಿ

ವಿಭಿನ್ನ ಶೈಲಿಯ ನಟರು ಮತ್ತು ನಿರ್ದೇಶಕರೂ ಆದ ರಿಷಬ್ ಶೆಟ್ಟಿ ಮತ್ತು ರಾಜ್ ಶೆಟ್ಟಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ತಮ್ಮ ಸಿನಿಮಾಗಳಲ್ಲಿ ಸಿನಿಮ್ಯಾಟಿಕ್ ಅಪ್ರೋಚ್ ಇರುತ್ತದೆ ಆದರೆ ರಾಜ್ ನೈಜವಾಗಿ ಚಿತ್ರಿಸಲು ಇಷ್ಟಪಡುವವರು ಎಂದು ಹೇಳುತ್ತಾರೆ ರಿಷಬ್. 
ಗರುಡ ಗಮನ ಋಷಭ ವಾಹನ ಸಿನಿಮಾದ ನನ್ನ ಪಾತ್ರ ನೋಡಿ ಪ್ರೇಕ್ಷಕರು ಸರ್ ಪ್ರೈಸ್ ಆಗುವುದು ಖಂಡಿತ: ರಿಷಬ್ ಶೆಟ್ಟಿ

ಬೆಂಗಳೂರು: ಗ್ಯಾಂಗ್ ಸ್ಟರ್ ಡ್ರಾಮಾ ಸಿನಿಮ ''ಗರುಡ ಗಮನ ಋಷಭ ವಾಹನ'' ಸಿನಿಮಾ ಕನ್ನಡದ ಇಬ್ಬರು ಪ್ರತಿಭಾನ್ವಿತ ಕಲಾವಿದರಾದ್ ರಿಷಬ್ ಶೆಟ್ಟಿ ಮತ್ತು ರಾಜ್ ಬಿ.ಶೆಟ್ಟಿ ಅವರನ್ನು ಕನ್ನಡ ಪ್ರೇಕ್ಷಕರಿಗೆ ಮರುಪರಿಚಯಿಸಲಿದೆ. ರಾಜ್ ಬಿ. ಶೆಟ್ಟಿ ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿದೆ. 

ಮಂಗಳೂರು ಪರಿಸರದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆ. ರಿಷಬ್ ಅವರು ಹರಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದು, ರಾಜ್ ಅವರು ಶಿವ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರೂ ಕಲಾವಿದರು ನಟನೆ ಮತ್ತು ನಿರ್ದೇಶನ ವಿಭಾಗದಲ್ಲಿಯೂ ಕೆಲಸ ನಿರ್ವಹಿಸಿದವರು. 

ವಿಭಿನ್ನ ಶೈಲಿಯ ನಟರು ಮತ್ತು ನಿರ್ದೇಶಕರೂ ಆದ ರಿಷಬ್ ಶೆಟ್ಟಿ ಮತ್ತು ರಾಜ್ ಶೆಟ್ಟಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ತಮ್ಮ ಸಿನಿಮಾಗಳಲ್ಲಿ ಸಿನಿಮ್ಯಾಟಿಕ್ ಅಪ್ರೋಚ್ ಇರುತ್ತದೆ ಆದರೆ ರಾಜ್ ನೈಜವಾಗಿ ಚಿತ್ರಿಸಲು ಇಷ್ಟಪಡುವವರು ಎಂದು ಹೇಳುತ್ತಾರೆ ರಿಷಬ್. 

ಈ ಹಿಂದೆ ರಿಷಬ್ ಬೆಲ್ ಬಾಟಂ ಸಿನಿಮಾದಲ್ಲಿ ಡಿಟೆಕ್ಟಿವ್ ದಿವಾಕರನ ಪಾತ್ರದಿಂದ ಈ ಸಿನಿಮಾದ ಹರಿಯಾಗಿ ಬದಲಾವಣೆಯಾಗಲು ಕೊಂಚ ಸಮಯ ತಗುಲಿತು ಎನ್ನುತ್ತಾರೆ ರಿಷಬ್. ರಿಷಬ್ ಅವರ ಲುಕ್ ಕೂಡ ಹರಿ ಪಾತ್ರವನ್ನು ರಾಜ್ ಅಂದುಕೊಂಡಂತೆಯೇ ನಿರೂಪಿಸುವಲ್ಲಿ ಪ್ರದಾನ ಪಾತ್ರ ವಹಿಸಿದೆ ಎನ್ನುವುದು ರಿಷಬ್ ಅಭಿಪ್ರಾಯ.  

ರಾಜ್ ಶೆಟ್ಟಿಯವರ ಒಂದು ಮೊಟ್ತೆಯ ಕತೆ ಸಿನಿಮಾ ನೋಡಿದಾಗಲೇ ರಾಜ್ ತಮ್ಮ ಸಿನಿಮಾದ ಪಾತ್ರಗಳನ್ನು ತೋರಿಸಿದ ರೀತಿ ಕಂಡು ರಿಷಬ್ ಮೆಚ್ಚಿದ್ದರು. ಆ ಸಿನಿಮಾ ನೋಡಿ ರಾಜ್ ಅವರನ್ನು ಭೇಟಿಯಾಗಿ ಮೆಚ್ಚುಗೆಯನ್ನೂ ಸೂಚಿಸಿದ್ದರು. ರಾಜ್ ಜೊತೆ ಕೆಲಸ ಮಾಡಬೇಕೆಂದು ತಾವು ಆಗಲೇ ಅಂದುಕೊಂಡಿದ್ದಾಗಿ ರಿಷಬ್ ಗುಟ್ಟು ಬಿಚ್ಚಿಟ್ಟಿದ್ದಾರೆ.

ಗರುಡ ಗಮನ ಋಷಭ ವಾಹನ ಸಿನಿಮಾವನ್ನು ರಕ್ಷಿತ್ ಶೆಟ್ಟಿಯವರ ಪರಂವಾಹ್ ಸ್ಟುಡಿಯೋ ಪ್ರಸ್ತುತ ಪಡಿಸುತ್ತಿದ್ದು, ಕೆಆರ್ ಜಿ ಸ್ಟುಡಿಯೋ ಹಂಚಿಕೆ ಮಾಡುತ್ತಿದೆ. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಭಾಗಿಯಾಗಿರುವುದನ್ನು ರಿಷಬ್ ಸ್ವಾಗತಿಸಿದ್ದಾರೆ. ಕಿರಿಕ್ ಪಾರ್ಟಿ ಕೂಡ ಅದೇ ಬ್ಯಾನರ್ ಅಡಿ ಬಿಡುಗಡೆಯಾಗಿತ್ತು. ಆ ಬ್ಯಾನರ್ ಗೆ ಒಳ್ಳೆಯ ಹೆಸರಿದೆ. ಹೀಗಾಗಿ ಅದರಿಂದಾಗಿ ಸಿನಿಮಾಗೆ ಹೆಚ್ಚಿನ ಬಲ ದೊರೆಯಲಿದೆ ಎನ್ನುವುದು ಅವರ ನಂಬಿಕೆ. 

Related Article

ಟ್ರೆಂಡ್ ಸೃಷ್ಟಿಸುತ್ತಿದೆ 'ಏಕ್ ಲವ್ ಯಾ' ಎಣ್ಣೆಗೂ ಹೆಣ್ಣಿಗೂ ಸಾಂಗ್: ಎಲ್ಲೆಲ್ಲೂ  ಹಾಡಿನ ಗುನುಗುನು!

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವಾಸೆ: ಮುಗಿಲ್ ಪೇಟೆಯಲ್ಲಿ ಕಯಾದು ಲೋಹರ್ ಮೊಹಬ್ಬತ್ ಮಿಂಚು

ಅರಮನೆ ಮೈದಾನದಲ್ಲಿ 'ಪುನೀತ್ ನಮನ' ಕಾರ್ಯಕ್ರಮ: ಗಣ್ಯರಿಗೆ ಆಹ್ವಾನ, ಸಿನಿಮಾ ಪ್ರದರ್ಶನ ಹೊರತುಪಡಿಸಿ ಬೇರೆಲ್ಲಾ ಚಟುವಟಿಕೆಗೆ ಬ್ರೇಕ್

ತೆಲುಗು ನಟಿಯ ಮೇಲೆ ಅಪರಿಚಿತನಿಂದ ಹಲ್ಲೆ: ಮೊಬೈಲ್ ಕಸಿದು ಪರಾರಿ

'ಅಪ್ಪು' ಅಗಲಿಕೆಯ ನೋವಲ್ಲೇ ಕೆಲಸಕ್ಕೆ ಮರಳಿದ ಶಿವಣ್ಣ: ನವೆಂಬರ್ 21ಕ್ಕೆ 'ವೇದ' ಸಿನಿಮಾ ಮೂಹೂರ್ತ!

ಕೊನೆಗೂ ಕ್ಷಮೆಯಾಚಿಸಿದ ಹಂಸಲೇಖ: ಪೇಜಾವರ ಶ್ರೀಗಳ ಬಗ್ಗೆ 'ನಾದಬ್ರಹ್ಮ' ಹೇಳಿದ್ದಾದರೂ ಏನು?

ತನಗಿಂತ ಕಿರಿಯರ ಜೊತೆ ಡೇಟಿಂಗ್ ವಿಚಾರ: ಪ್ರೇಮಕ್ಕೂ ವಯಸ್ಸಿಗೂ ಸಂಬಂಧವಿಲ್ಲ; ಅದು ಸಮಸ್ಯೆಯೇ ಅಲ್ಲ ಎಂದ ನಟಿ ರಶ್ಮಿಕಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com