ಡಾರ್ಲಿಂಗ್ ಕೃಷ್ಣ ಅಭಿನಯದ, ಶಶಾಂಕ್ ನಿರ್ದೇಶನದ ಚಿತ್ರಕ್ಕೆ ಹೆಸರು 'ಕೌಸಲ್ಯ ಸುಪ್ರಜಾ ರಾಮ'

ಲವ್ ಮಾಕ್‌ಟೇಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ಲವ್ 360 ಸಿನಿಮಾದ ನಿರ್ದೇಶಕ ಶಶಾಂಕ್ ಅವರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ 'ಕೌಸಲ್ಯ ಸುಪ್ರಜಾ ರಾಮ' ಎಂದು ಹೆಸರಿಡಲಾಗಿದ್ದು, ಕುತೂಹಲ ಉಂಟುಮಾಡಿದೆ.
ನಟ ಡಾರ್ಲಿಂಗ್ ಕೃಷ್ಣ
ನಟ ಡಾರ್ಲಿಂಗ್ ಕೃಷ್ಣ
Updated on: 

ಲವ್ ಮಾಕ್‌ಟೇಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ಲವ್ 360 ಸಿನಿಮಾದ ನಿರ್ದೇಶಕ ಶಶಾಂಕ್ ಅವರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ 'ಕೌಸಲ್ಯ ಸುಪ್ರಜಾ ರಾಮ' ಎಂದು ಹೆಸರಿಡಲಾಗಿದ್ದು, ಕುತೂಹಲ ಉಂಟುಮಾಡಿದೆ.

ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಬಗ್ಗೆ ಮಾತನಾಡಿರುವ ಕೃಷ್ಣ, ಕೆಲವೇ ಕೆಲವು ನಿರ್ದೇಶಕರು ಇಂದಿಗೂ ಗುಣಮಟ್ಟದ ಕೌಂಟುಬಿಕ ಚಿತ್ರಗಳನ್ನು ನೀಡುತ್ತಿದ್ದಾರೆ. ಅಂತವರಲ್ಲಿ ಖಂಡಿತವಾಗಿಯೂ ನಿರ್ದೇಶಕ ಶಶಾಂಕ್ ಒಬ್ಬರು ಎನ್ನುತ್ತಾರೆ.

'ನಾನು ಯಾವಾಗಲೂ ಸ್ಕ್ರಿಪ್ಟ್ ಮೇಲೆ ಗಮನ ಹರಿಸುತ್ತೇನೆ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾದ ಭಾಗವಾಗಲು ಬಯಸುತ್ತೇನೆ. ಇದು ಸರಿಯಾದ ಚಿತ್ರಕಥೆ ಮತ್ತು ನಿರ್ದೇಶಕರು ಎಂದು ನಾನು ಭಾವಿಸಿದೆ' ಎಂದು ಕೃಷ್ಣ ಹೇಳುತ್ತಾರೆ.

'ಪ್ರತಿ ಚಿತ್ರವು ಪ್ರೇಮಕಥೆಯನ್ನು ಹೊಂದಿರುತ್ತದೆ. ಆದರೆ, ಕುಟುಂಬದ ಮೇಲೆ ಬೆಳಕು ಚೆಲ್ಲುವ ಅಂಶಗಳು ಯಾವಾಗಲೂ ಭಾವನೆಗಳನ್ನು ಸೇರಿಸುತ್ತವೆ ಮತ್ತು ಇದು ಅಂತಹ ಒಂದು ಚಿತ್ರವಾಗಿದೆ'. ಕೌಸಲ್ಯ ಸುಪ್ರಜಾ ರಾಮ ಎಂಬ ಶೀರ್ಷಿಕೆಯಲ್ಲಿ ನಾಯಕನಿಗೆ ಇಬ್ಬರು ನಾಯಕಿಯರು ಇರುತ್ತಾರೆ ಎಂದು ಸೂಚಿಸಬಹುದು. ಆದರೆ, ಅದು ನಿಜವಲ್ಲ. 'ಇಲ್ಲಿ ನಾನು ಕೌಸಲ್ಯ ಅವರ ಮಗನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಮತ್ತು ಚಿತ್ರವು ತಾಯಿ-ಮಗನ ಸೆಂಟಿಮೆಂಟ್ ಅನ್ನು ಒಳಗೊಂಡಿದೆ. 'ಚಿತ್ರದಲ್ಲಿ ನನಗೆ ಎರಡು ಛಾಯೆಗಳಿದ್ದು, ಶೀಘ್ರದಲ್ಲೇ ಲುಕ್ ರಿವೀಲ್ ಆಗಲಿದೆ' ಎನ್ನುತ್ತಾರೆ.

ಕೌರವ ಪ್ರೊಡಕ್ಷನ್ ಹೌಸ್ ಮತ್ತು ಶಶಾಂಕ್ ಸಿನಿಮಾಸ್ ಜಂಟಿಯಾಗಿ ನಿರ್ಮಿಸಿರುವ 'ಕೌಸಲ್ಯ ಸುಪ್ರಜಾ ರಾಮ' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದು, ಸುಜ್ಞಾನ್ ಡಿಒಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಡಾರ್ಲಿಂಗ್ ಕೃಷ್ಣ ಎಂದೇ ಖ್ಯಾತಿಯಾಗಿರುವ ನಟನ 'ಕೃಷ್ಣ ಬ್ಯಾಚುಲರ್, ದಿಲ್‌ ಪಸಂದ್, ಶುಗರ್ ಫ್ಯಾಕ್ಟರಿ, ಲವ್ ಬರ್ಡ್ಸ್ ಮತ್ತು ಲವ್ ಮಿ ಆರ್ ಹೇಟ್ ಮಿ' ಸೇರಿದಂತೆ ಬ್ಯಾಕ್-ಟು-ಬ್ಯಾಕ್ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com