2,000 ವರ್ಷಗಳಷ್ಟು ಹಳೆಯದಾದ 'ಕಂಬಳ' ಕ್ರೀಡೆಯನ್ನು ಇಡೀ ವಿಶ್ವದ ಮುಂದೆ ಪ್ರಸ್ತುತ ಪಡಿಸಲು ಬಯಸುತ್ತೇನೆ: ರಾಜೇಂದ್ರ ಸಿಂಗ್ ಬಾಬು
ಜನಪ್ರಿಯ ಗ್ರಾಮೀಣ ಕ್ರೀಡೆಯಾದ ಕಂಬಳವು ಕೆಲ ಚಿತ್ರ ನಿರ್ಮಾಪಕರ ಗಮನವನ್ನು ಸೆಳೆದಿದೆ. ಈ ಪೈಕಿ ರಾಜೇಂದ್ರ ಸಿಂಗ್ ಬಾಬು ಅವರು, ವೀರ ಕಂಬಳ ಎಂಬ ಶೀರ್ಷಿಕೆ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
Published: 26th May 2022 12:13 PM | Last Updated: 26th May 2022 01:00 PM | A+A A-

ರಾಜೇಂದ್ರ ಸಿಂಗ್ ಬಾಬು
ಜನಪ್ರಿಯ ಗ್ರಾಮೀಣ ಕ್ರೀಡೆಯಾದ ಕಂಬಳವು ಕೆಲ ಚಿತ್ರ ನಿರ್ಮಾಪಕರ ಗಮನವನ್ನು ಸೆಳೆದಿದೆ. ಈ ಪೈಕಿ ರಾಜೇಂದ್ರ ಸಿಂಗ್ ಬಾಬು ಅವರು, ವೀರ ಕಂಬಳ ಎಂಬ ಶೀರ್ಷಿಕೆ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ನಾಗರಹೊಳೆ, ಟೋನಿ, ಬಂಧನ ಮತ್ತು ಮುತ್ತಿನ ಹಾರದಂತಹ ಹಿಟ್ ಚಿತ್ರಗಳನ್ನು ನೀಡಿ ಜನಪ್ರಿಯ ಗಳಿಸಿರುವ ರಾಜೇಂದ್ರ ಬಾಬು ಅವರು 2000 ವರ್ಷಗಳಷ್ಟು ಹಳೆಯ ಕ್ರೀಡೆಯಾಗಿರುವ ಕಂಬಳದ ಕುರಿತು ಚಿತ್ರ ನಿರ್ಮಿಸಲು ಉತ್ಸುಕರಾಗಿದ್ದಾರೆ.
ಕಂಬಳದ ಸ್ಟಾರ್ ಕ್ರೀಡಾ ಪಟುಗಳು ಈ ಚಿತ್ರದಲ್ಲಿ ಬಣ್ಣಹಚ್ಚಿದ್ದು, ಸುಮಾರು 20ಕ್ಕೂ ಹೆಚ್ಚು ಕಂಬಳದ ಕೋಣಗಳು ಚಿತ್ರದಲ್ಲಿ ಭಾಗಿಯಾಗಿವೆ. ಅರುಣ್ ರೈ ತೋಡಾರ್ ಕನ್ನಡ ಮತ್ತು ತುಳು ಭಾಷೆಗಳಲ್ಲಿ ಚಿತ್ರ ನಿರ್ಮಿಸಿದ್ದು, ಐದು ಭಾಷೆಗಳಲ್ಲಿ ಡಬ್ ಮಾಡಿ ಪ್ಯಾನ್ ಇಂಡಿಯಾ ಲೆವಲ್ನಲ್ಲಿ ರಿಲೀಸ್ ಮಾಡೋ ಯೋಜನೆಯಲ್ಲಿದ್ದಾರೆ.
ಆದಿತಿ ಸಿಂಗ್ ಬಾಬಾ, ರಾಧಿಕಾ ನಾರಾಯಣ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಪ್ರಕಾಶ್ ರಾಜ್ಗಾಗಿ ಚಿತ್ರತಂಡ ಕಾದು ಕುಳಿತಿದೆ.
ಇದನ್ನೂ ಓದಿ: 'ಕಾಂತಾರ' ಸಿನಿಮಾಗಾಗಿ ಕಂಬಳ ಓಟದ ದೃಶ್ಯ ಚಿತ್ರೀಕರಿಸಿದ ರಿಷಬ್ ಶೆಟ್ಟಿ
ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕರು, ಕಂಬಳವನ್ನು ಇಡೀ ಜಗತ್ತಿಗೆ ಪರಿಚಯಿಸಲು ಬಯಸುತ್ತಿದ್ದೇವೆ. ಮನುಷ್ಯ, ಪ್ರಾಣಿ, ಭೂಮಿ ಮತ್ತು ಪ್ರಕೃತಿಯ ನಡುವೆ ಬಲವಾದ ಸಂಬಂಧವಿದೆ, ಅದನ್ನು ನಿರೂಪಣೆಯ ಮೂಲಕ ಹೆಣೆಯಲಾಗಿದೆ ಎಂದು ಹೇಳಿದ್ದಾರೆ.
ಕರಾವಳಿ ಭಾಗದಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಅಕ್ಟೋಬರ್ ತಿಂಗಳಿನಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರವು ಸಂಪೂರ್ಣವಾಗಿ ಕಂಬಳದ ಕುರಿತಾಗಿರುವುದರಿಂದ ಸ್ಥಳೀಯ ತುಳು ಕಲಾವಿದರುಗಳನ್ನು ಚಿತ್ರದಲ್ಲಿಸ ಆಕಷ್ಟು ಬಳಸಿಕೊಳ್ಳಲಾಗಿದೆ. ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾಗಿರುವ ಶ್ರೀನಿವಾಸ ಗೌಡ ಹಾಗೂ ಸ್ವರಾಜ್ ಶೆಟ್ಟಿ ಕಂಬಳ ಓಡಿಸುವವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಚಿತ್ರದ್ಲಲಿ ಬರುವ ಒಂದು ವಿಶೇಷ ಪಾತ್ರದಲ್ಲಿ ನಟ ಆದಿತ್ಯ ಅಭಿನಯಿಸಿದ್ದಾರೆ. ಜೊತೆಗೆ ಇದೇ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ನಟಿ ರಾಧಿಕಾ ಚೇತನ್ ಅಭಿನಯಿಸಿದ್ದಾರೆ ಎಂದು ಮೀಹಿತಿ ನೀಡಿದ್ದಾರೆ.
ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಬಾತ್, ರಾಜಶೇಖರ್ ಕೋಟ್ಯಾನ್, ಮೈಮ್ ರಮೇಶ್, ಉಷಾ ಬಂಡಾರಿ, ಭೋರಜ ವಾಮಂಜೂರು, ಗೀತಾ ಸುರತ್ಕಲ ಮತ್ತು ಸುರೇಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮಣಿಕಾಂತ್ ಕದ್ರಿ ಚಿತ್ರಕ್ಕೆ ಸಂಗೀತ ನೀಡಿದ್ದು, ವೀರ ಕಂಬಳದ ಛಾಯಾಗ್ರಹಣವನ್ನು ಆರ್ ಗಿರಿ ವಹಿಸಿಕೊಂಡಿದ್ದಾರೆ.