ದೇವು ಅಂಬಿಗ ನಿರ್ದೇಶನದ 'ಸೈಕಲ್ ಸವಾರಿ' ನವೆಂಬರ್‌ನಲ್ಲಿ ಬಿಡುಗಡೆ

ದೇವು ಅಂಬಿಗ ನಿರ್ದೇಶನದ 'ಸೈಕಲ್ ಸವಾರಿ' ನವೆಂಬರ್ 3ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಮತ್ತು ಹಾಡನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಯಿತು. ಹಳ್ಳಿಯೊಂದರಲ್ಲಿ ಮಿಠಾಯಿ ತಯಾರಿಸಿ, ಮಾರಿಕೊಂಡು ಜೀವನ ನಡೆಸುತ್ತಿದ್ದ ಯುವಕನ ಕಥೆಯನ್ನು ಚಿತ್ರ ಒಳಗೊಂಡಿದೆ. 
ಸೈಕಲ್ ಸವಾರಿ ಚಿತ್ರದ ಸ್ಟಿಲ್
ಸೈಕಲ್ ಸವಾರಿ ಚಿತ್ರದ ಸ್ಟಿಲ್
Updated on

ದೇವು ಅಂಬಿಗ ನಿರ್ದೇಶನದ 'ಸೈಕಲ್ ಸವಾರಿ' ನವೆಂಬರ್ 3ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಮತ್ತು ಹಾಡನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಯಿತು. ಹಳ್ಳಿಯೊಂದರಲ್ಲಿ ಮಿಠಾಯಿ ತಯಾರಿಸಿ, ಮಾರಿಕೊಂಡು ಜೀವನ ನಡೆಸುತ್ತಿದ್ದ ಯುವಕನ ಕಥೆಯನ್ನು ಚಿತ್ರ ಒಳಗೊಂಡಿದೆ. 

ಹಳ್ಳಿಯಲ್ಲಿನ ತನ್ನ ಪ್ರಪಂಚದಲ್ಲಿದ್ದ ಯುವಕನನ್ನು ಶ್ರೀಮಂತ ಯುವತಿಯೊಬ್ಬಳು ಪ್ರೀತಿಸಿದಾಗ ಏನಾಗುತ್ತದೆ ಎಂಬುದೇ ಚಿತ್ರದ ತಿರುಳು. ಉತ್ತರ ಕರ್ನಾಟಕದಲ್ಲಿ ನಡೆಯುವ ಚಿತ್ರದಲ್ಲಿ ನಿರ್ದೇಶಕ ದೇವು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ನಿರ್ಮಾಪಕರಾಗಿಯೂ ಬಡ್ತಿ ಪಡೆದಿದ್ದಾರೆ. ವಿಜಯಪುರದ ದೀಕ್ಷಾ ಬೀಸೆ ನಾಯಕಿಯಾಗಿ ನಟಿಸಿದ್ದಾರೆ. 

ಚಿತ್ರಕ್ಕೆ ವಿನೋದ್ ಹಿರೇಮಠ್ ಸಂಗೀತ ಸಂಯೋಜಿಸಿದ್ದು, ಛಾಯಾಗ್ರಹಣ ಮತ್ತು ಡಿಐ ಅನ್ನು ರೋಹನ್ ಎಸ್ ದೇಸಾಯಿ ನಿರ್ವಹಿಸಿದ್ದಾರೆ.

ವಿಜಯಪುರದ ಸ್ಟುಡಿಯೋದಲ್ಲಿ ಅವರು ಕೆಲವು ಆರಂಭಿಕ ಚಿತ್ರೀಕರಣವನ್ನು ನಡೆಸಿದ್ದು, ಅಲ್ಲಿಯೇ ಪೋಸ್ಟ್ ಪ್ರೊಡಕ್ಷನ್ ಕೆಲಸವೂ ನಡೆದಿದೆ. 'ಲಾಕ್‌ಡೌನ್ ಸಮಯದಲ್ಲಿ, ನಾವು ಕೇವಲ 5 ಲಕ್ಷ ಬಜೆಟ್‌ನಲ್ಲಿ ಕಿರುಚಿತ್ರವನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದೇವೆ' ಎನ್ನುತ್ತಾರೆ ದೇವು.

ಸುರೇಶ್ ಶಿವೂರ್ ಚಿತ್ರಕ್ಕೆ ಬೆಂಬಲ ನೀಡಿದರು. ಹೀಗಾಗಿ, ಒಂದು ತಿಂಗಳೊಳಗೆ ಚಿತ್ರವನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ಸಿನಿಮಾದಲ್ಲಿ 5 ಹಾಡುಗಳಿದ್ದು, ಕಥೆಗೆ ಹೊಂದಿಕೊಂಡಂತೆ ರಚಿಸಲಾಗಿದೆ. ಚಿತ್ರವು ಆ್ಯಕ್ಷನ್, ಹಾಸ್ಯ, ಸಸ್ಪೆನ್ಸ್ ಮತ್ತು ಪ್ರೀತಿಯ ಮಿಶ್ರಣವನ್ನು ಒಳಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com