ಕೆಆರ್‌ಜಿ ಸ್ಟುಡಿಯೋಸ್‌ ಮುಂದಿನ ಚಿತ್ರದಲ್ಲಿ ದೊಡ್ಮನೆ ಕುಡಿ; ಧೀರೆನ್ ಆರ್ ರಾಜ್‌ಕುಮಾರ್ ಆಗಿ ಮರು ಪರಿಚಯ

ಕೆಆರ್‌ಜಿ ಸ್ಟುಡಿಯೋಸ್ ತಮ್ಮ ಮುಂದಿನ ಚಿತ್ರಕ್ಕಾಗಿ ದೊಡ್ಮನೆ ಕುಡಿ ಧೀರೆನ್ ರಾಮ್‌ಕುಮಾರ್ ಅವರನ್ನು ಕರೆತಂದಿದ್ದು, ಧೀರೆನ್ ಆರ್ ರಾಜ್‌ಕುಮಾರ್ ಆಗಿ ಮರು ಪರಿಚಯಿಸಲು ಸಿದ್ಧವಾಗಿದೆ. ಧಿರೇನ್ ಅವರು ದಿವಂಗತ ನಟ ರಾಜ್‌ಕುಮಾರ್ ಅವರ ಮಗಳಾದ ಪೂರ್ಣಿಮಾ ಮತ್ತು ನಟ ರಾಮ್‌ಕುಮಾರ್ ಅವರ ಮಗ.
ಕಾರ್ತಿಕ್ ಗೌಡ - ಧೀರೆನ್ ಆರ್ ರಾಜ್‌ಕುಮಾರ್ - ಕಾರ್ತಿಕ್ ಗೌಡ
ಕಾರ್ತಿಕ್ ಗೌಡ - ಧೀರೆನ್ ಆರ್ ರಾಜ್‌ಕುಮಾರ್ - ಕಾರ್ತಿಕ್ ಗೌಡ

ಕೆಆರ್‌ಜಿ ಸ್ಟುಡಿಯೋಸ್ ತಮ್ಮ ಮುಂದಿನ ಚಿತ್ರಕ್ಕಾಗಿ ದೊಡ್ಮನೆ ಕುಡಿ ಧೀರೆನ್ ರಾಮ್‌ಕುಮಾರ್ ಅವರನ್ನು ಕರೆತಂದಿದ್ದು, ಧಿರೇನ್ ಆರ್ ರಾಜ್‌ಕುಮಾರ್ ಆಗಿ ಮರು ಪರಿಚಯಿಸಲು ಸಿದ್ಧವಾಗಿದೆ. ಧೀರೆನ್ ಅವರು ದಿವಂಗತ ನಟ ರಾಜ್‌ಕುಮಾರ್ ಅವರ ಮಗಳಾದ ಪೂರ್ಣಿಮಾ ಮತ್ತು ನಟ ರಾಮ್‌ಕುಮಾರ್ ಅವರ ಮಗ.

ಶಿವ 143 ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಅವರು, ತಮ್ಮ ಮುಂದಿನ ಚಿತ್ರಕ್ಕಾಗಿ ನಿರ್ಮಾಪಕರಾದ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರೊಂದಿಗೆ ಸಹಕರಿಸಲು ಸಿದ್ಧರಾಗಿದ್ದಾರೆ. ಚಿತ್ರದ ನಿರ್ದೇಶಕರು ಮತ್ತು ತಾರಾಗಣದ ಬಗ್ಗೆ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು.

ರೋಹಿತ್ ಪದಕಿ ಅವರ ರತ್ನನ್ ಪ್ರಪಂಚ, ವಿಜಯ್ ನಾಗೇಂದ್ರ ಅವರ ಗುರುದೇವ್ ಹೊಯ್ಸಳ ಮತ್ತು ಜನಾರ್ದನ್ ಚಿಕ್ಕಣ್ಣ ಅವರ ಮುಂಬರುವ ಪೌಡರ್ ನಂತಹ ಪ್ರಾಜೆಕ್ಟ್‌ಗಳಿಗೆ ಹೆಸರುವಾಸಿಯಾದ ಪ್ರೊಡಕ್ಷನ್ ಹೌಸ್, ಇದೀಗ ತಾಜಾ ಕಂಟೆಂಟ್ ಮತ್ತು ಎಂಗೇಜಿಂಗ್ ಎಂಟರ್‌ಟೈನರ್‌ಗಳನ್ನು ಹುಡುಕುತ್ತಿದೆ. ಸದ್ಯ ನಿರ್ಮಾಪಕರು ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿರುವ ಉತ್ತರಕಾಂಡ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com