'ಜೂನಿ'ಗಾಗಿ ಚೆಫ್ ಆದ ನಟ ಪೃಥ್ವಿ ಅಂಬರ್

ನಟ ಪೃಥ್ವಿ ಅಂಬರ್ ಅಭಿನಯದ, ವೈಭವ್ ಮಹಾದೇವ್ ನಿರ್ದೇಶನದ ರೊಮ್ಯಾಂಟಿಂಕ್ ಡ್ರಾಮಾ ಜೂನಿ ಚಿತ್ರ ಫೆಬ್ರವರಿ 9 ರಂದು ಬಿಡುಗಡೆಯಾಗಲು ಸಜ್ಜಾಗಿದ್ದು, ಚಿತ್ರದಲ್ಲಿ ಪೃಥ್ವಿ ಅಂಬರ್ ಅವರು ಚೆಫ್ (ಬಾಣಸಿಗ) ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ರಿಷಿಕಾ ನಾಯಕ್, ಜೂನಿ ಚಿತ್ರದ ಸ್ಟಿಲ್, ಪೃಥ್ವಿ ಅಂಬರ್

ನಿರ್ದೇಶಕ ವೈಭವ್ ಅವರು ಈ ಹಿಂದೆ ಜುನಿ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ಈಗ ಜೂನಿ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ಪ್ರಾಗ್ ಫಿಲ್ಮ್ ಸ್ಕೂಲ್ ನಲ್ಲಿ ನಿರ್ದೇಶಕರ ಕೋರ್ಸ್ ಮುಗಿಸಿರುವ ವೈಭವ್ ಅವರು, ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ವಿಭಿನ್ನ ಟೈಟಲ್ ಜೂನಿ ಸಿನಿಮಾದಲ್ಲಿ ನಾಯಕಿ ರಿಷಿಕಾ ನಾಯಕ್ ನಟಿಸಿದ್ದಾರೆ.

ಜೂನಿ ಚಿತ್ರದ ಚಿತ್ರೀಕರಣ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ನಡೆದಿದ್ದು, ಚಿತ್ರಕ್ಕೆ ನಕುಲ್ ಅಭ್ಯಂಕರ್ ಅವರ ಸಂಗೀತ, ಅಜಿನ್ ಬಿ ಮತ್ತು ಜಿತಿನ್ ದಾಸ್ ಅವರ ಛಾಯಾಗ್ರಹಣ ಮತ್ತು ನವೀನ್ ಅವರ ಕಲಾ ನಿರ್ದೇಶನವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com