

ನಟಿ ಮೃಣಾಲ್ ಠಾಕೂರ್ ಮತ್ತು ತಮಿಳು ನಟ ಧನುಷ್ ಫೆಬ್ರುವರಿ 14 ರಂದು ಖಾಸಗಿ ಸಮಾರಂಭದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ದಂಪತಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದಿದ್ದರೂ, ಮೃಣಾಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರೀತಿಯ ಬಗೆಗಿನ ತಮ್ಮ ಗ್ರಹಿಕೆಗಳನ್ನು ಹಂಚಿಕೊಂಡಿದ್ದಾರೆ.
'ಪ್ರೀತಿ ಒಂದು ಸುಂದರವಾದ ಭಾವನೆ ಮತ್ತು ಈ ಗ್ರಹದಲ್ಲಿರುವ ಪ್ರತಿಯೊಬ್ಬರಿಗೂ ಪ್ರೀತಿ ಎಂಬುದು ಆಗಬೇಕು ಎಂದು ನಾನು ಭಾವಿಸುತ್ತೇನೆ. ಅದು ನಿಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ಬದಲಿಸುತ್ತದೆ. ಇದು ಅಕ್ಷರಶಃ ರೀಪೇರೆಂಟಿಂಗ್ ಮಾಡಿದಂತೆ ಮತ್ತು ನಿಮ್ಮೊಳಗಿನ ಸಮಸ್ಯೆಗಳನ್ನು ಸರಿಪಡಿಸಿದಂತೆ. ಇದು ಜಗತ್ತಿನ ಅತ್ಯಂತ ಸುಂದರವಾದ ವಿಷಯ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರೀತಿಯನ್ನು ಕಂಡುಕೊಳ್ಳಬೇಕೆಂದು ನಾನು ನಿಜವಾಗಿಯೂ ಪ್ರಾರ್ಥಿಸುತ್ತೇನೆ ಮತ್ತು ಆಶಿಸುತ್ತೇನೆ' ಎಂದು ಫಿಲ್ಮಿಗ್ಯಾನ್ ಜೊತೆಗಿನ ಚಾಟ್‌ನಲ್ಲಿ ಮೃಣಾಲ್ ಹೇಳಿದರು.
ಮಹಿಳೆಯರು ಪ್ರೀತಿಯಲ್ಲಿ ಹೆಚ್ಚಿನದನ್ನು ಕೊಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆಯೇ ಎಂದು ಕೇಳಿದಾಗ, ಯಾರಾದರೂ ಪ್ರೀತಿಯಲ್ಲಿರುವಾಗ, ಆ ವ್ಯಕ್ತಿ ಲಿಂಗವನ್ನು ಲೆಕ್ಕಿಸದೆ ತಮ್ಮ ಸಂಗಾತಿಗಾಗಿ ಏನಾದರೂ ಮಾಡಲು ಒಲವು ತೋರುತ್ತಾರೆ ಎಂದು ಹೇಳಿದರು.
'ಮಹಿಳೆಯರು ಮಾತ್ರ ಕೊಡುತ್ತಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ಪ್ರೀತಿಯಲ್ಲಿರುವ ಯಾರಾದರೂ ಹೆಚ್ಚು ಕೊಡುವವರೇ ಆಗಿರುತ್ತಾರೆ. ಆದರೆ, ಪ್ರೀತಿಯಲ್ಲಿ ಮುಖ್ಯವಾದುದು ಅದನ್ನು ಸ್ವೀಕರಿಸುವುದು. ಕೆಲವೊಮ್ಮೆ, ಪ್ರೀತಿಯನ್ನು ಸ್ವೀಕರಿಸುವುದು ಮತ್ತು ಪ್ರೀತಿಯನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ. ಪ್ರೀತಿಯ ವ್ಯಾಖ್ಯಾನ ಬದಲಾಗುತ್ತಿದೆ' ಎಂದರು.
'ಪ್ರೀತಿ ಮಾತ್ರ ಸ್ಥಿರವಾಗಿರುತ್ತದೆ. ನೀವು ಅದನ್ನು ಹೇಗೆ ಸ್ವೀಕರಿಸುತ್ತೀರಿ ಎಂಬುದು ಮುಖ್ಯ. ಹುಡುಗ ಅಥವಾ ಹುಡುಗಿ ಯಾರಾದಾರೂ ಪ್ರೀತಿಯಲ್ಲಿರುವಾಗ, ಇಬ್ಬರೂ ಕೊಡುವವರೇ. ಮಹಿಳೆಯೋ, ಪುರುಷರೋ ಎಂಬುದು ಅಪ್ರಸ್ತುತ. ಜಬ್ ಪ್ಯಾರ್ ಹೋತಾ ಹೈ (ಪ್ರೀತಿ ಇದ್ದಾಗ), ನೀವು ಆ ವ್ಯಕ್ತಿಗಾಗಿ ಕೆಲಸಗಳನ್ನು ಮಾಡುತ್ತೀರಿ. ನೀವು ಶರಣಾಗಬೇಕು!' ಎಂದು ಮೃಣಾಲ್ ವಿವರಿಸಿದರು.
ಮೃಣಾಲ್ ತಮ್ಮ ಹೊಸ ಹಾಡು 'ಭೀಗಿ ಭೀಗಿ' ಯ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಾಡಿಗೆ ಎಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದು, ಎಆರ್ ಅಮೀನ್ ಮತ್ತು ಜಸ್ಲೀನ್ ರಾಯಲ್ ಹಾಡಿದ್ದಾರೆ ಮತ್ತು ಇರ್ಷಾದ್ ಕಾಮಿಲ್ ಅವರು ಸಾಹಿತ್ಯ ಬರೆದಿದ್ದಾರೆ. ಈ ಮ್ಯೂಸಿಕ್ ಆಲ್ಬಂನಲ್ಲಿ ದುಲ್ಕರ್ ಸಲ್ಮಾನ್ ಕೂಡ ಇದ್ದಾರೆ.
Advertisement