Upasana and Ramcharan
ಉಪಾಸನಾ -ರಾಮ್ ಚರಣ್

ಶ್ರೀರಾಮನ ಜನ್ಮನಕ್ಷತ್ರದಲ್ಲಿ ಹುಟ್ಟಿದ ಅವಳಿ ಮಕ್ಕಳಿಗೆ ದೇವರ ಹೆಸರಿಟ್ಟ ರಾಮಚರಣ್-ಉಪಾಸನಾ ದಂಪತಿ!

ರಾಮ್ ಚರಣ್ ಈಗ ಮೂವರು ಮಕ್ಕಳ ತಂದೆಯಾಗಿದ್ದಾರೆ. ಈ ಖುಷಿ ಸುದ್ದಿಯ ಜೊತೆಗೆ, ಮತ್ತೊಂದು ಕುತೂಹಲಕಾರಿ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.
Published on

ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಇತ್ತೀಚೆಗೆ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಈ ಮೊದಲು ಹುಟ್ಟಿದ ಮಗಳಿಗೆ ಕ್ಲಿಂ​ಕಾರ ಎಂದು ಹೆಸರು ಇಟ್ಟಿದ್ದರು. ಈ ಬಾರಿ ಅವಳಿ ಮಕ್ಕಳಿಗೂ ಇವರು ಭಿನ್ನ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ರಾಮ್ ಚರಣ್ ಈಗ ಮೂವರು ಮಕ್ಕಳ ತಂದೆಯಾಗಿದ್ದಾರೆ. ಈ ಖುಷಿ ಸುದ್ದಿಯ ಜೊತೆಗೆ, ಮತ್ತೊಂದು ಕುತೂಹಲಕಾರಿ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಫೆಬ್ರವರಿ 11 ರಂದು ನಾಮಕರಣ ಸಮಾರಂಭ ಅದ್ದೂರಿಯಾಗಿ ನಡೆದಿದೆ ಎಂಬ ಸುದ್ದಿ ವೈರಲ್ ಆಗಿದೆ. ಈ ಕಾರ್ಯಕ್ರಮಕ್ಕೆ ಕುಟುಂಬದ ಆಪ್ತರು ಮಾತ್ರ ಬಂದಿದ್ದರಂತೆ.

ಗಂಡು ಮಗುವಿಗೆ 'ಶಿವರಾಮ್' ಮತ್ತು ಹೆಣ್ಣು ಮಗುವಿಗೆ 'ಅನ್ವಿರಾ ದೇವಿ' ಎಂದು ಹೆಸರಿಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಮೆಗಾ ಕುಟುಂಬ ಈ ಹೆಸರುಗಳನ್ನು ಅಧಿಕೃತವಾಗಿ ಎಲ್ಲಿಯೂ ಘೋಷಿಸಿಲ್ಲ. ಸದ್ಯಕ್ಕೆ ಈ ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಶಿವರಾಮ್ ಎಂಬುದು ಹಿಂದೂ ದೇವರುಗಳಾದ ಶಿವ ಹಾಗೂ ರಾಮನ ಸಮ್ಮಿಲನವಾಗಿದೆ. ಕೊನಿಡೆಲಾ ಶಿವರಾಮ್ ಎಂದು ಮಗನಿಗೆ ಕರೆಯಲಾಗುತ್ತದೆ. ಮಗನಿಗೆ ದೇವರ ಹೆಸರನ್ನು ಇಟ್ಟಿರುವುದಕ್ಕೆ ಅನೇಕರಿಗೆ ಖುಷಿಯಾಗಿದೆ. ಇನ್ನು, ಮಗಳಿಗೆ ಅನ್ವೀರಾ ದೇವಿ ಎಂದು ಇಡಲಾಗಿದೆಯಂತೆ. ಇದು ಪ್ರಾಚೀನ ಪರಿಭಾಷೆಯಲ್ಲಿ ಧೈರ್ಯ ಮತ್ತು ಕೃಪೆಯ ಸಮ್ಮಿಲನವನ್ನು ಪ್ರತಿನಿಧಿಸುತ್ತದೆ.

Upasana and Ramcharan
ನಟ ರಾಮ್ ಚರಣ್, ಉಪಾಸನಾ ಬಾಳಲ್ಲಿ ಅವಳಿ ಮಕ್ಕಳು ಜನನ; ಖುಷಿ ಹಂಚಿಕೊಂಡ ತಾತ ಚಿರಂಜೀವಿ

ರಾಮ್ ಚರಣ್-ಉಪಾಸನಾ ಅವರ ಅವಳಿ ಮಕ್ಕಳು ಜನವರಿ 31, ಶನಿವಾರದಂದು ಜನಿಸಿದ್ದಾರೆ. ಇವರು ಪುನರ್ವಸು ನಕ್ಷತ್ರದಲ್ಲಿ ಹುಟ್ಟಿರುವುದು ಅತ್ಯಂತ ಶುಭಪ್ರದ. ಏಕೆಂದರೆ ಇದು ಶ್ರೀರಾಮನು ಜನಿಸಿದ ನಕ್ಷತ್ರ. ಇದೇ ಕಾರಣಕ್ಕೆ ಗಂಡು ಮಗುವಿಗೆ 'ಶಿವರಾಮ್' ಎಂದು ಹೆಸರಿಡಲಾಗಿದೆ ಎಂಬ ಸುದ್ದಿ ವೈರಲ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com