ತೆಲಂಗಾಣ: ತೆಲಂಗಾಣದ ಹೈದರಾಬಾದ್‌ನ ಆದಿಬಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಹೊರ ವರ್ತುಲ ರಸ್ತೆ (ORR) ಯ ನಿರ್ಗಮನ ಸಂಖ್ಯೆ 12ರ ಬಳಿ ನಡೆದ ರಸ್ತೆ ಅಪಘಾತದಲ್ಲಿ ತೆಲುಗು ನಟ ಭರತ್ ಕಾಂತ್ ಮತ್ತು ಮತ್ತೊಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ.
ತಡರಾತ್ರಿ ಅಪಘಾತ ಸಂಭವಿಸಿದೆ. ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದಿಬಟ್ಲಾ ಪೊಲೀಸರ ಪ್ರಕಾರ, 'ನಿನ್ನೆ ರಾತ್ರಿ ಔಟರ್ ರಿಂಗ್ ರೋಡ್‌ನ ನಿರ್ಗಮನ ಸಂಖ್ಯೆ 12ರಲ್ಲಿ ಭರತ್ ಕಾರಂತ್ ಅವರಿದ್ದ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ನಾವು ಪ್ರಕರಣ ದಾಖಲಿಸಿದ್ದೇವೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದ್ದೇವೆ ಮತ್ತು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ.
ಮೃತಪಟ್ಟಿರುವ ಎರಡನೇ ವ್ಯಕ್ತಿಯ ಗುರುತನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ.
ಭರತ್ ಕಾಂತ್ 2021ರಲ್ಲಿ ತೆರೆಕಂಡ 'ಗ್ರಾಮಮ್' ಮತ್ತು 2024ರಲ್ಲಿ ತೆರೆಕಂಡ ಟೆನೆಂಟ್ ಚಿತ್ರಗಳಲ್ಲಿ ನಟಿಸಿದ್ದರು. ಮತ್ತು ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಅವರು ಗೀತಾಂಜಲಿ ಮತ್ತು ಪಾರ್ವತಿ ಪರಮೇಶ್ವರಾಲು ಮುಂತಾದ ವೆಬ್ ಸರಣಿಗಳಲ್ಲಿಯೂ ಕಾಣಿಸಿಕೊಂಡಿದ್ದರು.
Advertisement