ಅಂಕಣಗಳು

ಮೋದಿ ಜಾಗತಿಕ ನಾಯಕತ್ವಕ್ಕೆ ಅಂತರ್ಜಾಲವೇ ಹೆಬ್ಬಾಗಿಲು

Published On :

ಅಂತರ್ಜಾಲ ಆಡಳಿತದ ನಿಲುವುಗಳು ನರೇಂದ್ರ ಮೋದಿಯವರನ್ನು ಜಾಗತಿಕ ನಾಯಕತ್ವಕ್ಕೆ ಕೊಂಡೊಯ್ಯಬಲ್ಲದು. ಅಂತರ್ಜಾಲದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ, ರಾಷ್ಟ್ರೀಯ ಅಂಕಿ ಅಂಶಗಳು ಮತ್ತು ಈ ವಿಷಯದಲ್ಲಿ ಪ್ರಸ್ತುತ ವಿಶ್ವ ನಾಯಕತ್ವ ಸ್ಥಾನದ ನಿರ್ವಾತ ಸ್ಥಿತಿಯಲ್ಲಿ, ಅಂತರ್ಜಾಲ ಮತ್ತು ಸಾಮಾಜಿಕ ತಾಣಗಳ ಭವಿಷ್ಯವನ್ನು ನಿರೂಪಿಸುವಲ್ಲಿ ಜಾಗತಿಕವಾಗಿ, ಭಾರತ ಒಂದು ಪ್ರಮುಖ ಕೇಂದ್ರವಾಗಿ ಮತ್ತು ವಿಶ್ವ ನಾಯಕರಾಗಿ ಹೊರಹೊಮ್ಮಲು ಮೋದಿಯವರಿಗೆ ಸೂಕ್ತ ಅವಕಾಶಗಳಿವೆ.

ಪ್ರಧಾನಿ ನರೇಂದ್ರ ಮೋದಿಯವರ ನಿಯೋಜಿತ ಬ್ರೆಜಿಲ್‌ನ ಬ್ರಿಕ್ಸ್ (ಇಖಐಈಖ) ಶೃಂಗಸಭೆ, ವಿಶ್ವಸಂಸ್ಥೆ ಮತ್ತು ಅಮೆರಿಕ ಭೇಟಿಗಳು, ಅಂತಾರಾಷ್ಟ್ರೀಯ ರಾಜತಾಂತ್ರಿಕ ಜಗತ್ತಿಗೆ ಅವರ ಮೊದಲ ಪ್ರವೇಶವಾಗಲಿದೆ. ಇದಕ್ಕಿಂತ ದೊಡ್ಡ ಸನ್ನಿವೇಶ ಮತ್ತೊಂದು ಇರಲು ಸಾಧ್ಯವಿಲ್ಲ. ನಿಸ್ಸಂಶಯವಾಗಿ, ಅಲ್ಲಿ ಮೋದಿಯವರ ನಡೆ, ನುಡಿ ಮತ್ತು ನಿಲುವುಗಳ ಮೂಲಕ ಇಡೀ ಜಗತ್ತಿಗೆ ಅವರ ಪರಿಚಯವಾಗಲಿದೆ. ಅಲ್ಲಿ ಅವರ ಮೇಲೆ, ಹಲವಾರು ಒಪ್ಪಂದಗಳನ್ನು ಅಂತಿಮಗೊಳಿಸುವ, ಮಾತುಕತೆಗಳನ್ನು ಮುಂದುವರಿಸುವ ಮತ್ತು ಚರ್ಚೆಗಳನ್ನು ಪ್ರವರ್ತಿಸುವ ಮಹತ್ವದ ಹೊಣೆಗಾರಿಕೆಗಳ ಜೊತೆಗೆ, ಕನಿಷ್ಠ ಇಂತಹ ಒಂದು ಅವಕಾಶವಿದೆ. ಯಾವುದರ ಮೂಲಕ ಸದ್ಯೋಭವಿಷ್ಯದಲ್ಲೇ, 1.2 ಬಿಲಿಯನ್ ಜನರ ಆಶೋತ್ತರಗಳನ್ನಷ್ಟೇ ಅಲ್ಲದೇ ಇಡೀ ಜಗತ್ತಿನ ಜನರ ಭಾವನೆಗಳಿಗೆ ದನಿ ನೀಡಿ, ನರೇಂದ್ರ ಮೋದಿ ವಿಶ್ವ ನಾಯಕರಾಗಿ ಮನ್ನಣೆ ಗಳಿಸಬಹುದು. ಭೂಮಿಯ ಮೇಲಿರುವ 7 ಬಿಲಿಯನ್ ಜನರ ಮೇಲೆ, 3 ಬಿಲಿಯನ್ ಬಳಕೆದಾರರು ಮತ್ತು 4 ಬಿಲಿಯನ್ ಭಾವಿ ಅಂತರ್ಜಾಲ ಬಳಕೆದಾರರ ಮೇಲೆ, ಪ್ರಭಾವ ಬೀರಲಿದೆಯೋ, ಅದೇ ಅಂತರ್ಜಾಲ ಆಡಳಿತ (ಐಟಿಡಿಜ್ಠಟಿಜಡಿ ಎ್ಟಢಜ್ಠಟಿಛಟ್ಛಿಜ) ವಿಚಾರ.
ಮೋದಿಯವರು ಅಂತರ್ಜಾಲ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವವರೆಂಬುದು ಅವರ ಅನೇಕ ಹೇಳಿಕೆಗಳು, 19 ಮಿಲಿಯನ್ ಫೇಸ್ ಬುಕ್‌ನಲ್ಲಿ ಮತ್ತು ಟ್ವಿಟ್ಟರ್‌ನಲ್ಲಿ 5 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವುದರಿಂದಲೇ ಸಿದ್ಧವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಇತ್ತೀಚೆಗೆ ಫೇಸ್ ಬುಕ್ ಸಿ.ಒ.ಒ. ಶೆರಿಲ್ ಸ್ಯಾಂಡ್ಬರ್ಗ್‌ರೊಡನೆ ಅವರು ನಡೆಸಿದ ಉನ್ನತ ಮಾತುಕತೆಯ ಸ್ತರದಿಂದ ಸ್ಪಷ್ಟವಾಗಿದೆ.
ವಿವಾದಾಸ್ಪದ ಕಣ್ಗಾವಲಿನ ವಿಚಾರದಲ್ಲಿ ಅಮೆರಿಕದ ದೈತ್ಯ ಸಾಮಾಜಿಕ ಮಾಧ್ಯಮ ಕಂಪನಿಯನ್ನು ಮೋದಿ ತರಾಟೆಗೆ ತೆಗೆದುಕೊಳ್ಳುವರೆಂಬ ಸಾಮಾನ್ಯ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ - ಈ ವಿಚಾರ ಖಂಡಿತವಾಗಿಯೂ ಅಮೆರಿಕದೊಂದಿಗಿನ ನಮ್ಮ ರಾಜತಾಂತ್ರಿಕ ಮಾತುಕತೆ ವೇಳೆ ಪ್ರಸ್ತಾಪವಾಗಿರುವುದು ಖಚಿತವಿದ್ದರೂ ಸಾಮಾಜಿಕ ತಾಣಗಳ ಧನಾತ್ಮಕ ಅಂಶಗಳ ಬಗ್ಗೆ ಮೋದಿ ಗಮನ ಹರಿಸಿದರು. ಇನ್ನೂ ಅನೇಕ ವಿಷಯಗಳ ಜೊತೆಗೆ ಮಹಾತ್ಮ ಗಾಂಧೀಜಿಯವರ 150ನೆಯ ಜನ್ಮಶತಮಾನೋತ್ಸವ ಸಂದರ್ಭದಲ್ಲಿ, ಒಂದು ರಾಷ್ಟ್ರೀಯ ಸ್ವಚ್ಛತಾ ಅಭಿಯಾನಕ್ಕೆ ಫೇಸ್‌ಬುಕ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ಚರ್ಚಿಸಿದರು. ಯಾವ ವಿಚಾರದಲ್ಲಿ ಇವತ್ತು ಇಡೀ ವಿಶ್ವದಲ್ಲಿ, ವಿಶೇಷವಾಗಿ ಅಮೆರಿಕ ಕೂಡ ನಾಯಕತ್ವದ ಮತ್ತು ಮುನ್ನಡೆಯುವ ದಿಕ್ಕಿನ ಕೊರತೆ ಎದುರಿಸುತ್ತಿದೆಯೋ ಅಂತಹ ವಿಷಯದಲ್ಲಿ ಮೋದಿಯವರ ಚಿಂತನೆಗಳು, ಆದ್ಯತೆಗಳು ಮತ್ತು ಅವರ ವೈಯಕ್ತಿಕ ಅನುಭವಗಳ ಮೂಲಕ ಬಹುಶಃ ಅವರನ್ನು ಜಾಗತಿಕ ನಾಯಕತ್ವ ವಹಿಸಿಕೊಳ್ಳಲು ಅತ್ಯುತ್ತಮ ಸ್ಥಾನದಲ್ಲಿ ನಿಲ್ಲಿಸಿದೆ. ಅಂತರ್ಜಾಲ ಆಡಳಿತದ ಎಲ್ಲ ಅಂಶಗಳ ಕುರಿತ ಜಾಗತಿಕ ಸಂವಾದಗಳಿಗೆ ಅವಕಾಶ ಮಾಡಿಕೊಡುವ ಮುಂಚೂಣಿ ದೇಶವಾಗಿ, ಈ ವಿಚಾರದಲ್ಲಿ ಜಾಗತಿಕ ಕೇಂದ್ರದಂತೆ ತಟಸ್ಥ ವೇದಿಕೆಯನ್ನೊದಗಿಸುವ ರಾಷ್ಟ್ರವಾಗಿ ಭಾರತ ಗುರುತಿಸಿಕೊಳ್ಳಬಹುದಾದ ಅಪರೂಪದ ಅವಕಾಶ ಪ್ರಾಪ್ತವಾಗಿದೆ. ಆ ಮೂಲಕ, ಇನ್ನೆರಡು ವರ್ಷಗಳಲ್ಲಿಯೇ, ಜಗತ್ತಿನ ಎಲ್ಲ ಜನರ ಮೇಲೆ ಪ್ರಭಾವ ಬೀರುವ, ವಿಶೇಷವಾಗಿ ಬಡವರ, ಸಂಪರ್ಕ ರಹಿತರ ಮತ್ತು ಯುವಕರನ್ನು ಬಾಧಿಸುವ ವಿಷಯದಲ್ಲಿ ಕೌಶಲ್ಯದಿಂದ ಚಿಂತನೆ ನಡೆಸುವ ಒಬ್ಬ ವಿಶ್ವ ರಾಜನೀತಿ ತಜ್ಞ ಸ್ಥಾನದಲ್ಲಿ ಮೋದಿಯವರನ್ನು ತಂದು ನಿಲ್ಲಿಸಬಲ್ಲದು.
ನಮ್ಮ ರಾಷ್ಟ್ರೀಯ ಚುನಾವಣೆಗಳಲ್ಲಿ ಭ್ರಷ್ಟಾಚಾರ ಮತ್ತು ಶಾಸನ ವಿಷಯಗಳು ವೇದಿಕೆಯಾಗಿದ್ದಂತೆ, ಅಂತಾರಾಷ್ಟ್ರೀಯವಾಗಿ, ಇವತ್ತು ಹವಾಮಾನದ ವೈಪರೀತ್ಯ, ಜಾಗತಿಕ ವ್ಯಾಪಾರ ಅಥವಾ ನಿಶ್ಯಸ್ತ್ರೀಕರಣಕ್ಕಿಂತಲೂ, ಅಂತರ್ಜಾಲ ಆಡಳಿತದ ವಿಷಯ ಅತ್ಯಂತ ಪ್ರಮುಖ ವಿಷಯವಾಗಿದೆ. ಇದು ಏಕೆಂದರೆ, ಇತರ ಸವಾಲುಗಳಿಗಿಂತ ಮಿಗಿಲಾಗಿ ಜಗತ್ತಿನ ಪ್ರತಿಯೊಬ್ಬ ನಾಗರಿಕನೂ ಕೂಡ ಯಾವುದಾದರೊಂದು ರೀತಿಯಲ್ಲಿ ಅಂತರ್ಜಾಲವನ್ನು ಬಳಸುತ್ತಿದ್ದಾನೆ ಮತ್ತು ಅದರ ನಿರ್ಣಯಗಳು ಅವರನ್ನು ನೇರವಾಗಿ ಬಾಧಿಸುತ್ತಿವೆ.
ಹಾಗಿದ್ದರೂ, ಮೋದಿಯವರನ್ನು ವಿಶ್ವಾಸಾರ್ಹ ರಾಜನೀತಿ ತಜ್ಞನೆಂದು ಜಗತ್ತು ಒಪ್ಪಿಕೊಳ್ಳುವುದಕ್ಕೂ ಮುಂಚೆ ಹಲವಾರು ಕ್ರಮಗಳನ್ನು ಇಲ್ಲಿ ತೆಗೆದುಕೊಳ್ಳಬೇಕಾಗಿದೆ:-
1. ಇರಾನ್, ಸೌದಿ ಅರೇಬಿಯಾ, ರಷ್ಯಾ ಮತ್ತು ಒಂದು ಹಂತದವರೆಗೆ ಚೀನಾದಂತಹ ರಾಷ್ಟ್ರಗಳ ಸಾಲಿನಲ್ಲಿ ಪರಿಗಣಿತವಾಗುತ್ತಿರುವ ಭಾರತ ತನ್ನ ಕಠಿಣ ನಿಲುವನ್ನು ಸಡಲಿಸಿಕೊಳ್ಳಬೇಕು.
2. ಹಲವಾರು ಗಂಭೀರ ವಿಚಾರಗಳಲ್ಲಿ ಸ್ವಿಟ್ಜರ್ಲೆಂಡ್ ಉದ್ಯುಕ್ತವಾಗುವಂತೆ 'ಚರ್ಚೆಗೆ ಎಂದರೆ ಭಾರತಕ್ಕೆ' ಹೋಗಬೇಕು ಎಂಬಂತಹ ವಾತಾವರಣ ನಿರ್ಮಾಣ ಮಾಡಬೇಕು. ಅಂತರ್ಜಾಲ ಆಡಳಿತದ ಕುರಿತು ಭಾರತ ಎಲ್ಲ ದನಿಗಳ ಸಮಷ್ಟಿ ದನಿಯಾಗಿ ಕಾಣಬೇಕೇ ಹೊರತು ವಿಪರೀತ ನಿಲುವಿನ ಒಡಕಿನ ದನಿಯಾಗಬಾರದು.
3. ದೇಶದೊಳಗೆ ಕೂಡ ಪೂರ್ಣ ಪ್ರಮಾಣದಲ್ಲಿ ಅರ್ಹತೆಯ ಆಧಾರದ ಮೇಲೆ ಬಹುಸ್ತರದ ಬಾಧ್ಯಸ್ಥರನ್ನೊಳಗೊಂಡಂತೆ ಸಮಾಲೋಚನೆಗಳನ್ನು ನಡೆಸಬೇಕು. ತಮ್ಮ ನಿಲುವುಗಳಿಗೆ ಅಂಟಿಕೊಂಡವರ ಉದ್ದೇಶಗಳನ್ನು ಸಂದೇಹಿಸದೆ, ಎಲ್ಲರನ್ನೂ ಕರೆದು ಮಾತನಾಡಬೇಕು ಮತ್ತು ಅರ್ಹವಾದ ಸಲಹೆ ಸೂಚನೆಗಳನ್ನು ಅಂಗೀಕರಿಸಬೇಕು.
4. ಇದಲ್ಲದೆ, ಅಂತರ್ -ಸರ್ಕಾರ ಪ್ರಕ್ರಿಯೆಗಳಿಗೆ, ಸಹಕಾರಗಳಿಗೆ ಮತ್ತು ಸಮಾಧಾನಗಳಿಗೆ ಒಳಪಡುವ ಫಾರೆನ್ಸಿಕ್ ಸೈಬರ್ ಅಪರಾಧ ವಿಷಯಗಳನ್ನು, ಸಾಮಾನ್ಯ ಅಂತರ್ಜಾಲ ಆಡಳಿತ ವಿಷಯಗಳೊಂದಿಗೆ ಬೆರೆಸಬಾರದು. ಸೈಬರ್ ಭದ್ರತೆಯಲ್ಲಿ ಸೈಬರ್ ಅಪರಾಧಗಳು ಪ್ರಮುಖವಾದದ್ದಾದರೂ, ಪ್ರವೇಶ, ಬಹುಭಾಷಾ ಸಂಬಂಧಿತ ವಿಷಯ, ಅತಿಮುಖ್ಯ ಅಂತರ್ಜಾಲ ಸಂಪನ್ಮೂಲಗಳು, ಅಭಿವೃದ್ಧಿಯಲ್ಲಿ ಇದರ ಬಳಕೆ, ಇ-ಆಡಳಿತ ಮತ್ತು ಹೊರಹೊಮ್ಮುತ್ತಿರುವ ಐಪಿವಿ6, ಕ್ಲೌಡ್, ಎಮ್ ಟು ಎಮ್ ಮುಂತಾದ ಅದಕ್ಕಿಂತಲೂ ಮಿಗಿಲಾದ ಅನೇಕ ಮುಖ್ಯ ವಿಚಾರಗಳಿವೆ. ಪ್ರಮುಖವಾದದ್ದಾದರೂ ಚಿಕ್ಕದಾದ ಸೈಬರ್ ಅಪರಾಧಗಳ ವಿಚಾರವನ್ನು ಅಗಾಧವಾದ ಮತ್ತು ಸಂಕೀರ್ಣವಾದ ಅಂತರ್ಜಾಲ ಆಡಳಿತ ವಿಷಯದ ಜೊತೆಗೆ ಬೆರೆಸಿ ಗೊಂದಲ ಮಾಡಿಕೊಳ್ಳಬಾರದು.
5. ಇದಕ್ಕೆ ಸಮಾನಾಂತರವಾಗಿ, ಜಾಗತಿಕ ವೇದಿಕೆಗಳಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಲು, ಈ ವಿಷಯದಲ್ಲಿ ಸ್ಪಷ್ಟ ಮಾಹಿತಿ, ತಿಳಿವಳಿಕೆ ಹೊಂದಿರುವ, ಪ್ರಭಾಮಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ಪಡೆದ ಸಂಪನ್ಮೂಲಗಳ ಜೊತೆಗೆ ನಮ್ಮ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯೂ ಸಮನ್ವಯ ಸಾಧಿಸಿ ನಮ್ಮ ರಾಯಭಾರಿಗಳಾಗಿ ನೇಮಿಸಿಕೊಳ್ಳಬೇಕು.
6. ಕೊನೆಯದಾಗಿ, ಚರ್ಚೆಗಳಿಗೆ ತಟಸ್ಥ ತಾಣವಾಗಿದ್ದರೂ, ಭಾರತ ತನ್ನ ರಹಸ್ಯ ಕಾರ್ಯಸೂಚಿಯನ್ನಾಗಲಿ ಅಥವಾ ಪೂರ್ವಾಗ್ರಹಗಳಿಂದಾಗಲಿ ಯಾವ ಮಾತುಕತೆಯನ್ನೂ ಹಾಳುಗೆಡಹುದಿಲ್ಲವೆಂಬ ವಿಶ್ವಾಸವನ್ನು ವಿಶ್ವಕ್ಕೆ ಮೂಡಿಸಬೇಕು. ನೆನಪಿರಲಿ. ಇದಕ್ಕೆ ಪ್ರಯತ್ನಿಸಿದ ಪ್ರತಿಯೊಂದು ದೇಶವೂ ಸೋತಿದೆ. ಕೆಲ ತಿಂಗಳುಗಳ ಹಿಂದೆ, ನೆಟ್ಮುಂಡೆಯಲ್‌ನಲ್ಲಿ ನಡೆದ ಸಣ್ಣ ಸಭೆಯ ಮೂಲಕ ಬ್ರೆಜಿಲ್ಲಿನ ಡಿಲ್ಮಾ ರೊಸೆಫ್ ಇದರಲ್ಲಿ ಕಿಂಚಿತ್ ಯಶಸ್ಸನ್ನು ಪಡೆದರೂ ಅಂತರ್ಜಾಲ ಆಡಳಿತದಲ್ಲಿ ಇರಬೇಕಾದ ವಿಸ್ತಾರಕ್ಕೆ ಇದು ಬಹಳ ದೂರವಾದದ್ದು. ಆದ್ದರಿಂದ ಮೋದಿ ಈ ವಿಚಾರದಲ್ಲಿ ಹಿರಿದಾಗಿ ಆಲೋಚಿಸಬೇಕು. ಬಹಳ ದೊಡ್ಡ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಬಹುದು.
ಅಮೆರಿಕದ ಎನ್.ಎಸ್.ಎ ಯ ಕಣ್ಗಾವಲಿನ ಬಗ್ಗೆ ಭಾರತದ ಕಾಳಜಿಗಳನ್ನು ತಳ್ಳಿಹಾಕುವಂತಿಲ್ಲ. ಅಲ್ಲಿನ ಸರ್ಕಾರದ ಜೊತೆಗೆ ಈ ವಿಷಯವಾಗಿ ದೃಢವಾಗಿ ಚರ್ಚಿಸಬೇಕು. ಆದರೆ ಜಾಗತಿಕ ಅಂತರ್ಜಾಲ ಆಡಳಿತಕ್ಕೆ ಸಂಬಂಧಿಸಿದ ನಿಲುವಿಗೆ ಕಣ್ಗಾವಲಿನ ಬಣ್ಣವನ್ನೊ ಅಥವಾ ಪಶ್ಚಿಮ ವಿರೋಧಿ ರಾಷ್ಟ್ರಗಳ ಬಣ್ಣವನ್ನು ಹಚ್ಚಿ ಆ ದಕ್ಷಿಣಾತ್ಯ ಗುಂಪಿನ ಮುಂದಾಳುವಾಗಿ ಗುರುತಿಸಿಕೊಳ್ಳುವುದು ತಪ್ಪು ಗ್ರಹಿಕೆಯಾದೀತು ಮತ್ತು ಇದರಿಂದ ನಮ್ಮ ಪ್ರಧಾನ ಮಂತ್ರಿಗಳಿಗೆ ಯಾವ ಸಾಧನೆಯೂ ದಕ್ಕುವುದಿಲ್ಲ. ಇಂತಹ ನಡೆಯಿಂದ ಭಾರತ ಜಗತ್ತಿನ ಎತ್ತರದ ಕುಬ್ಜನಾಗಬಹುದೇ ಹೊರತು ಅವಕಾಶವಿದ್ದರೂ ಜಾಗತಿಕ ನಾಯಕನಾಗಲು ಸಾಧ್ಯವಿಲ್ಲ.

-ರಾಜೀವ್ ಚಂದ್ರಶೇಖರ್
ಸಂಸತ್ ಸದಸ್ಯರು, ರಾಜ್ಯಸಭೆ
rajeev.c@sansad.nic.in
www.rajeev.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.