ಸರ್ಕಾರದ ಈ ಖಾಜಿ ನ್ಯಾಯ ಎಷ್ಟು ಸರಿ?
ಈ ರಾಜ್ಯದ ಮುಜರಾಯಿ ಇಲಾಖೆಯ ಲೆಕ್ಕದ ಪ್ರಕಾರ ಸರಿ ಸುಮಾರು (ರಾಜ್ಯದಲ್ಲಿ) ಸಾವಿರ ದೇವಾಲಯಗಳು ಇವೆ. ಇವುಗಳಲ್ಲಿ ಶೇ. 2ರಷ್ಟು ಮಾತ್ರ ಶ್ರೀಮಂತ ದೇವಾಲಯಗಳಾಗಿದ್ದು ಶೇ. 20ರಷ್ಟು ದೇವಾಲಯಗಳು ಸಾಮಾನ್ಯ ಆದಾಯದ ದೇವಾಲಯಗಳಾಗಿದ್ದು ಉಳಿದವುಗಳು ಪ್ರತಿದಿನ ದೀಪ ಹಚ್ಚಲು ಎಣ್ಣೆಗೂ, ಬತ್ತಿಗೂ ತತ್ವಾರವಾಗಿರುವಂತೆ ದೇವಸ್ಥಾನಗಳು. ಇಲ್ಲಿನ ಅರ್ಚಕರುಗಳು ಕೆಲವರಿಗೆ ವರ್ಷಕ್ಕೆ 1000 ರು.ಗಳವರೆಗೆ ಸಂಬಳ ದೊರೆಯುತ್ತಿತ್ತು. ಕೆಲವು ದೇವಸ್ಥಾನಗಳಿಗೆ ಅದೂ ದೊರೆಯುತ್ತಿರಲಿಲ್ಲ.
ಹೀಗಿರುವಾಗ ಜೆಡಿಎಸ್ ಮತ್ತು ಬಿಜೆಪಿ ಸಂಯುಕ್ತ ಸರ್ಕಾರವಿದ್ದಾಗ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆದ ಬಿ.ಎಸ್. ಯಡಿಯೂರಪ್ಪ ಮೊಟ್ಟ ಮೊದಲ ಬಾರಿಗೆ ವರ್ಷಕ್ಕೆ 6000 ರೂ.ಗಳನ್ನು (ಕನಿಷ್ಟ ವೇತನ) ಕೊಡುವುದರ ಮೂಲಕ ಭಿಕ್ಷುಕರಿಗಿಂತಲೂ ಕನಿಷ್ಠವಾಗಿದ್ದ ಅರ್ಚಕರ ಜೀವನಕ್ಕೆ ಸ್ವಲ್ಪ ಗೌರವ ತಂದು ಕೊಡುವ ಕೆಲಸ ಮಾಡಿದರು. ನಂತರವಷ್ಟೇ ಮುಜರಾಯಿ ಸಚಿವ ಡಾ. ವಿ.ಎಸ್. ಆಚಾರ್ಯ ಅವರ 12 ಸಾವಿರ ರು.ಗಳಂತೆ ಕೊಟ್ಟರು. ನಂತರ ಇದೇ ಬಿಜೆಪಿ ಸರ್ಕಾರ ತಿಂಗಳಿಗೆ 2000 ರೂ.ಗಳಂತೆ ವರ್ಷಕ್ಕೆ 24 ಸಾವಿರ ರು.ಗಳನ್ನು ಮಂಜೂರು ಮಾಡಿ ಹಣ ಬಿಡುಗಡೆ ಮಾಡಿತ್ತು. ನಂತರ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಬಜೆಟ್ನಲ್ಲಿ ಸದರಿ 24000 ರೂ.ಗಳನ್ನು ತಾನೇ ಕೊಟ್ಟಂತೆ ಘೋಷಣೆ ಮಾಡಿದರೂ ಕೇವಲ 1600 ರು.ಗಳನ್ನು ಕೊಟ್ಟಿತ್ತು. ಈ ವರ್ಷ ಕೇವಲ 12000 ರು.ಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಇಷ್ಟಾಗಿ ಸರ್ಕಾರ ಈ ಹಣವನ್ನು ತನ್ನ ಕೈಯಿಂದ ಕೊಡುತ್ತಿಲ್ಲ. ರಾಜ್ಯದ ಕೆಲವೇ ಶ್ರೀಮಂತ ದೇವಾಲಯಗಳಿಂದ ವರ್ಷಕ್ಕೆ ಬರುತ್ತಿರುವ ನೂರಾರು ಕೋಟಿ ರು.ಗಳ ಸಂಗ್ರಹಗಳಿಂದ ಕೊಡಲಾಗುತ್ತಿದೆ. ಇನ್ನು ರಾಜ್ಯದ ಅನೇಕ ಪುರಾತನ, ಐತಿಹಾಸಿಕ ದೇವಾಲಯಗಳು ಶಿಥಿಲವಾಗಿ ಬೀಳುವ ಸ್ಥಿತಿಯಲ್ಲಿದ್ದರೂ ಅದರ ಜೀರ್ಣೋದ್ಧಾರಕ್ಕಾಗಿ ಪ್ರಸ್ತಾವನೆ ಕಳುಹಿಸಿದರೆ, ಇಲಾಖೆ ಬಿಡುಗಡೆ ಮಾಡಬಹುದಾದ ಅತ್ಯಲ್ಪ ಹಣಕ್ಕೂ ಪ್ರಭಾವಿಗಳ ಮುಖಾಂತರವೇ ಹೋಗದಿದ್ದರೆ ಅದು ಕಸದ ಬುಟ್ಟಿ ಸೇರುವುದಂತು ಖಂಡಿತ. ಇನ್ನು ಭಕ್ತಾದಿಗಳಿಂದಲೋ ದಾನಿಗಳ ಸಹಾಯದಿಂದಲೋ ಜೀರ್ಣೋದ್ಧಾರ ಮಾಡಲು ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಿದರೆ ವರ್ಷಗಟ್ಟಲೆ ಕಳೆದರೂ ಸಲ್ಲಿಸಿದ ಪ್ರಸ್ತಾವನೆ ಗತಿ ಏನಾಯಿತೆಂದು ತಿಳಿಯುವುದಿಲ್ಲ. ಇನ್ನು ಮುಜರಾಯಿ ವಿಷಯಕ್ಕೆ ಬಂದರೆ ಸರ್ಕಾರದ ಸಚಿವ ಸಂಪುಟದಲ್ಲಿ ಮುಜರಾಯಿ ಖಾತೆ ಎಂಬ ಒಂದು ಸ್ವತಂತ್ರ ಖಾತೆಯೊಂದಿದ್ದು ಇದು ಕೇವಲ ಸಚಿವ ಪದವಿಗಾಗಿ ಮತ್ತು ಅದರ ಸವಲತ್ತಿಗಾಗಿ ಮಾತ್ರ ಇರುತ್ತದೆಯೇ ಹೊರತು ಅವರಿಂದ ರಾಜ್ಯದ ದೇವಾಲಯಗಳಿಗೆ ಯಾವುದೇ ಉಪಯೋಗವಿಲ್ಲ. ಆದರೂ ಅದಕ್ಕೆ ಅಪವಾದವೆಂಬಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂತ್ರಿಗಳಾಗಿದ್ದ ಡಾ. ವಿ.ಎಸ್. ಆಚಾರ್ಯ ಮತ್ತು ಅತ್ಯಲ್ಪ ಅವಧಿಯಲ್ಲಿ ತುಂಬಾ ಕ್ರಿಯಾಶೀಲರಾಗಿ ಕೆಲಸ ಮಾಡಿದ ಕೋಟ ಶ್ರೀನಿವಾಸ ಪೂಜಾರಿಯವರು ದೇವಸ್ಥಾನಗಳ ಮತ್ತು ಅರ್ಚಕರುಗಳ ಬಗ್ಗೆ ಗಮನ ಹರಿಸಿದ್ದು ಬಿಟ್ಟರೆ ಉಳಿದವರು ಕೇವಲ ಖಾತೆ ಭರ್ತಿಗೆ ಮಾತ್ರ ಮಂತ್ರಿಗಳಾಗಿದ್ದರು. ದೇವಸ್ಥಾನಗಳಲ್ಲಿ ಭಕ್ತಾದಿಗಳು ಹಾಕುವ ಕಾಣಿಕೆ ಸಲ್ಲಿಸುವ ಸೇವೆ ಮತ್ತು ದೇವಾಲಯಗಳ ಇತರ ಮೂಲಗಳಿಂದ ಬರುವ ಆದಾಯವನ್ನು ರಾಜ್ಯದ ಮುಜರಾಯಿ ಇಲಾಖೆಯ ಸಾಮಾನ್ಯ ಸಂಗ್ರಹನಿಧಿ ಎಂಬ ಹೆಸರಿನಲ್ಲಿ ಕ್ರೋಢೀಕರಿಸಲಾಗುವುದು. ಈ ಹಣದಿಂದ ರಾಜ್ಯದ ದೇವಸ್ಥಾನಗಳ ನಿರ್ವಹಣೆ ಮತ್ತು ಅರ್ಚಕರ ಸಂಭಾವನೆ (ವೇತನ) ಇತರೆ ಖರ್ಚುಗಳನ್ನು ಭರಿಸಲು ಉಪಯೋಗಿಸಲಾಗುವುದು. ಈಗ ಮಾನ್ಯ ಸಿದ್ದರಾಮಯ್ಯನವರ ಜಾತ್ಯತೀತ (?) ಸರ್ಕಾರವು ತನ್ನ ತತ್ವಕ್ಕೆ ಬದ್ಧವಾಗಿ ರಾಜ್ಯದ ಮಸೀದಿಗಳಲ್ಲಿರುವ ಮೌಲ್ವಿಗಳಿಗೆ ತಿಂಗಳಿಗೆ 3000 ರೂ.ಗಳನ್ನು ಕೊಡಲು ತೀರ್ಮಾನಿಸಿದೆ. ಆ ಹಣ ಮುಜರಾಯಿಯಿಂದಲ್ಲದೇ ಇನ್ನೆಲ್ಲಿಂದ ಬರುತ್ತದೆ? ಹೇಗಿದೆ ಖಾಜಿ ನ್ಯಾಯ? ಮೌಲ್ವಿಗಳಿಗೆ 3000 ರೂ.ಗಳನ್ನು ಕೊಡುವುದಕ್ಕೆ ಖಂಡಿತಾ ನಮ್ಮ ವಿರೋಧವಿಲ್ಲ. ಅವರೂ ಕೂಡ ನಮ್ಮ ಬಡ ಅರ್ಚಕರಿದ್ದಂತೆ. ಆದರೆ ಮೊದಲು ಆದಾಯ ತಂದುಕೊಡುತ್ತಿರುವ ಹಿಂದೂ ದೇವಾಲಯಗಳಿಗೆ ಅಗತ್ಯವಾಗಿ ಸಲ್ಲಬೇಕಾದ ನ್ಯಾಯ ಸಿಗಲಿ.
- ಅಜಿತ್ ಗೋಪಾಲಕೃಷ್ಣಭಟ್ಟ, ತೀರ್ಥಹಳ್ಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

