ಅದನ್ನ ಹೀಗೂ ಅರ್ಥೈಸಬಹದು, ಯಾವ ಬ್ಯಾಂಕ್ ಸರಿಯಾಗಿ ಕೆಲಸಮಾಡುತ್ತಿಲ್ಲ ಅಥವಾ ಲಾಭದಾಯಕವಲ್ಲ ಅಂತಹ ಬ್ಯಾಂಕಿನ ಲಯಬಲಿಟಿಯನ್ನ ಅಳಿಸಿಹಾಕುವುದು (“writing down of the liabilities”) ಮತ್ತು ಇನ್ನೊಂದು ಸಶಕ್ತ ಬ್ಯಾಂಕ್ ಅದನ್ನ ಕೊಂಡುಕೊಳ್ಳುವುದು ಅಥವಾ ಸಶಕ್ತ ಬ್ಯಾಂಕಿನಲ್ಲಿ ವಿಲೀನಗೊಳಿಸುವುದು. ಇದು ಹೇಗಾಯಿತೆಂದರೆ ಎಲ್ಲದರಲ್ಲೂ ಕೆಟ್ಟದ್ದನ್ನೇ ನೋಡುವ ಮನಸ್ಸಿನವನು ಬಾಗಿಲು ಅರ್ಧ ಮುಚ್ಚಿದೆ ಅಂದಹಾಗೆ. ಬಾಗಿಲು ಅರ್ಧ ತೆಗೆದಿದೆ ಕೂಡ ಅಲ್ಲವೇ? ನಾವು ತೆಗೆದಿರುವ ಬಾಗಿಲ ಕುರಿತು ಮಾತನಾಡೋಣ.