ಐಪಿಎಲ್ 2016: ಧೋನಿ ತಂಡವನ್ನು ಮಣಿಸಿದ ರೈನಾ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 9ನೇ ಆವೃತ್ತಿಯ ರೈಸಿಂಗ್ ಪುಣೆ ಹಾಗೂ ಗುಜರಾಜ್ ಲಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ರೈನಾ ನಾಯಕತ್ವದ...
ಗುಜರಾತ್ ಲಯನ್ಸ್ ತಂಡ
ಗುಜರಾತ್ ಲಯನ್ಸ್ ತಂಡ
Updated on: 

ರಾಜ್‌ಕೋಟ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 9ನೇ ಆವೃತ್ತಿಯ ರೈಸಿಂಗ್ ಪುಣೆ ಹಾಗೂ ಗುಜರಾಜ್ ಲಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ರೈನಾ ನಾಯಕತ್ವದ ಗುಜರಾತ್ ತಂಡ ಎಂಎಸ್ ಧೋನಿ ಸಾರಥ್ಯದ ರೈಸಿಂಗ್ ಪುಣೆ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಂಪಾದಿಸಿದೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಮಾಡಿದ ಪುಣೆ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್‌ಗೆ 163 ರನ್‌ಗಳಿಸಲಷ್ಟೇ ಸಾಧ್ಯವಾಯಿತು. ಈ ಮೊತ್ತವನ್ನು ಬೆನ್ನತ್ತಿದ ಗುಜರಾತ್ ತಂಡ 18 ಓವರ್‌ಗಳಲ್ಲಿ 3 ವಿಕೆಟ್‌ಗೆ 164 ರನ್ ಪೇರಿಸಿ ಗೆಲುವು ಸಾಧಿಸಿತು.

ಗುಜರಾತ್ ಲಯನ್ಸ್ ಪರ ಫಿಂಚ್ 50, ಮೆಕ್ಕಲಂ 49, ಸುರೇಶ್ ರೈನಾ 24, ಡ್ವೇನ್ ಬ್ರವೋ ಅಜೇಯ 22 ಹಾಗೂ ರವೀಂದ್ರ ಜಡೇಜಾ 4 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿದರು.

ರೈಸಿಂಗ್ ಪುಣೆ ಪರ ಎಂ. ಅಶ್ವಿನ್ 2, ಇಶಾಂತ್ ಶರ್ಮ 1 ವಿಕೆಟ್ ಪಡೆದಿದ್ದಾರೆ.

ರೈಸಿಂಗ್ ಪುಣೆ ಪರ ಅಂಜಿಕ್ಯಾ ರಹಾನೆ 21, ಡುಪ್ಲೆಸಿಸ್ 69, ಕೆವಿನ್ ಪೀಟರ್ಸೆನ್ 37, ಸ್ಟೀವನ್ ಸ್ಮಿತ್ 5, ಮಿಚೆಲ್ ಮಾರ್ಷ್ 7 ರನ್ ಗಳಿಸಿ ಔಟಾದರೆ, ಎಂಎಸ್ ಧೋನಿ ಅಜೇಯ 22 ಹಾಗೂ ರಜತ್ ಭಾಟಿಯಾ ಅಜೇಯ 0 ರನ್ ಗಳಿಸಿದ್ದಾರೆ.

ಗುಜರಾತ್ ಲಯನ್ಸ್ ಪರ ಪ್ರಮೀಣ್ ತಂಬೆ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಡ್ವೇನ್ ಬ್ರಾವೋ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com