ಕ್ರಿಸ್ ಗೇಯ್ಲ್ ಟಿ20 ಕ್ರಿಕೆಟ್ ನಲ್ಲಿ 700 ಸಿಕ್ಸರ್ ಸಾಧನೆ

ಸ್ಫೋಟಕ ಬ್ಯಾಟಿಂಗ್‍ಗೆ ಹೆಸರಾಗಿರುವ ವೆಸ್ಟ್ ಇಂಡೀಸ್ ನ ಸ್ಟಾರ್ ಕ್ರಿಕೆಟಿಗ ಕ್ರಿಸ್ ಗೇಯ್ಲ್ ಇದೀಗ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ...
ಕ್ರಿಸ್ ಗೇಯ್ಲ್
ಕ್ರಿಸ್ ಗೇಯ್ಲ್

ಸ್ಫೋಟಕ ಬ್ಯಾಟಿಂಗ್‍ಗೆ ಹೆಸರಾಗಿರುವ ವೆಸ್ಟ್ ಇಂಡೀಸ್ ನ ಸ್ಟಾರ್ ಕ್ರಿಕೆಟಿಗ ಕ್ರಿಸ್ ಗೇಯ್ಲ್ ಇದೀಗ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ 700 ಸಿಕ್ಸರ್ ಸಿಡಿಸುವ ಮೂಲಕ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎರಡನೇ ಆವೃತ್ತಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಟ್ರಿನ್ಬಾಗೋ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಗೇಯ್ಲ್ ಈ ಸಾಧನೆ ಮಾಡಿದ್ದಾರೆ.

ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಕ್ರಿಸ್ ಗೇಯ್ಲ್ ದಾಖಲೆಯನ್ನು ಅಳಿಸಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಕಾರಣ 500 ಸಿಕ್ಸರ್ ಬಾರಿಸಿದ ಆಸುಪಾಸಿನಲ್ಲಿ ಯಾವ ಆಟಗಾರನು ಇಲ್ಲ ಇನ್ನು 700 ಸಿಕ್ಸರ್ ಹೊಡೆಯುವುದೆಂದರೆ ಕಷ್ಟ ಸಾಧ್ಯ. ಹೀಗಾಗಿ ಈ ಸಾಧನೆ ಕ್ರಿಸ್ ಗೇಯ್ಲ್ ಅವರ ಸರ್ವಕಾಲಿಕ ಸಾಧನೆಯಾಗೇ ಉಳಿಯಲಿದೆ.

ವೆಸ್ಟ್ ಇಂಡೀಸ್ ನ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್ ಮನ್ ಕೀರನ್ ಪೋಲಾರ್ಡ್ 412 ಸಿಕ್ಸರ್ ಗಳ ಮೂಲಕ 2ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್ 312 ಸಿಕ್ಸರ ಗಳ ಮೂಲಕ 3ನೇ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com