ಎಂಎಸ್ ಧೋನಿ, ನನ್ನ ನಡುವೆ ಯಾವುದೇ ವೈರತ್ವವಿಲ್ಲ: ಗಂಭೀರ್

ಟೀಂ ಇಂಡಿಯಾ ಸೀಮಿತ ಓವರ್ ಗಳ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಜತೆ ಭಿನ್ನಾಭಿಪ್ರಾಯ ಇರಬಹುದೇ ಹೊರತು ವೈರತ್ವವಿಲ್ಲ ಎಂದು ಭಾರತದ ಮಾಜಿ...
ಎಂಎಸ್ ಧೋನಿ, ಗೌತಮ್ ಗಂಭೀರ್
ಎಂಎಸ್ ಧೋನಿ, ಗೌತಮ್ ಗಂಭೀರ್
Updated on: 
ನವದೆಹಲಿ: ಟೀಂ ಇಂಡಿಯಾ ಸೀಮಿತ ಓವರ್ ಗಳ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಜತೆ ಭಿನ್ನಾಭಿಪ್ರಾಯ ಇರಬಹುದೇ ಹೊರತು ವೈರತ್ವವಿಲ್ಲ ಎಂದು ಭಾರತದ ಮಾಜಿ ಉಪ ನಾಯಕ ಗೌತಮ್ ಗಂಭೀರ್ ಹೇಳಿದ್ದಾರೆ. 
ಫೇಸ್ ಬುಕ್ ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿರುವ ಗಂಭೀರ್ ನನ್ನ ಮತ್ತು ಧೋನಿಯ ನಡುವೆ ಭಿನ್ನಾಭಿಪ್ರಾಯಗಳಿರಬಹುದೇ ಹೊರತು ವೈರತ್ವವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
ನಾವಿಬ್ಬರು ಜತೆಯಾಗಿ ಆಡುವ ಸಂದರ್ಭದಲ್ಲಿ ನಮ್ಮಿಬ್ಬರ ಆದ್ಯತೆ ತಂಡವನ್ನು ಗೆಲ್ಲಿಸುವುದೇ ಆಗಿತ್ತು. ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದರು ತಂಡದ ಶ್ರೇಷ್ಠ ಪ್ರದರ್ಶನವೊಂದೇ ನಮ್ಮಿಬ್ಬರ ಗುರಿಯಾಗಿತ್ತು. ಧೋನಿ ಒಬ್ಬ ಅದ್ಬುತ ಆಟಗಾರ, ಅಷ್ಟೇ ಚೋಗ್ಯ ವ್ಯಕ್ತಿ ಎಂದೂ ಇದೇ ಸಂವಾದದ ವೇಳೆ ಗಂಭೀರ್ ಹೇಳಿದ್ದಾರೆ. 
ಈ ಹಿಂದೆ ಗಂಭೀರ್ ಮತ್ತು ಸೆಹ್ವಾಗ್ ರನ್ನು ತಂಡದಿಂದ ಹೊರಹಾಕಲು ಧೋನಿಯೇ ಕಾರಣ ಎಂದೂ ಊಹಾಪೋಹಗಳಿತ್ತು. ಇದಕ್ಕೆ ಗೌತಮ್ ಗಂಭೀರ್ ತೆರೆ ಎಳೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com