ಆರ್ಸಿಬಿ ಆಟಗಾರ ಸಚಿನ್ ಬೇಬಿ ವಿಶಿಷ್ಟ ವಿವಾಹ ಆಹ್ವಾನ ವಿಡಿಯೋ ವೈರಲ್

ಇತ್ತೀಚೆಗೆ ವಿವಾಹ ಆಹ್ವಾನಕ್ಕೆ ವಿಡಿಯೋ ಮೊರೆ ಹೋಗುತ್ತಿದ್ದು ಇದೀಗ ಕೇರಳದ ಕ್ರಿಕೆಟಿಗ ಸಚಿನ್ ಬೇಬಿ ಅವರು ತಮ್ಮ ಮದುವೆಯ ಆಹ್ವಾನಕ್ಕೆ ವಿಶಿಷ್ಟ ವಿಡಿಯೋವೊಂದನ್ನು...
ಸಚಿನ್ ಬೇಬಿ, ಅನ್ನಾ ಚಾಂಡಿ
ಸಚಿನ್ ಬೇಬಿ, ಅನ್ನಾ ಚಾಂಡಿ
Updated on: 
ಕೊಚ್ಚಿ: ಇತ್ತೀಚೆಗೆ ವಿವಾಹ ಆಹ್ವಾನಕ್ಕೆ ವಿಡಿಯೋ ಮೊರೆ ಹೋಗುತ್ತಿದ್ದು ಇದೀಗ ಕೇರಳದ ಕ್ರಿಕೆಟಿಗ ಸಚಿನ್ ಬೇಬಿ ಅವರು ತಮ್ಮ ಮದುವೆಯ ಆಹ್ವಾನಕ್ಕೆ ವಿಶಿಷ್ಟ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಆಡುತ್ತಿರುವ ಸಚಿನ್ ಬೇಬಿ ತೊಡುಪ್ಪುಳದ ಸೇಟ್ ಸೆಬಾಸ್ಟಿಯನ್ಸ್ ಚರ್ಚ್ ನಲ್ಲಿ ಜನವರಿ 5ರಂದು ಅನ್ನಾ ಚಾಂಡಿ ಅವರನ್ನು ವರಿಸಲಿದ್ದಾರೆ. 
ಮದುವೆ ಆಮಂತ್ರಣಕ್ಕಾಗಿ ಸಚಿನ್ ಭಾವಿ ಪತ್ನಿ ಅನ್ನಾ ಚಾಂಡಿ ಜತೆಗೂಡಿ ವಿಶೇಷ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಆರ್ಸಿಬಿ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಗೆ ಇಳಿಯುವ ಸಚಿನ್, ಆನ್ನಾ ಎಸೆತದಲ್ಲಿ ಬೌಲ್ಡ್ ಆಗುತ್ತಾರೆ. ಬಳಿಕ ಅನ್ನಾ ಬಳಿ ಬಂದು ಮೊಣಕಾಲೂರಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಮತ್ತು ಅನ್ನಾ ಅದನ್ನು ಅಂಗೀಕರಿಸುವ ದೃಶ್ಯ ವಿಡಿಯೋದಲ್ಲಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಡೆಂಟಲ್ ಪದವೀಧರೆಯಾಗಿರುವ ಅನ್ನಾ ಕಳೆದ ಒಂದು ವರ್ಷ ಸಚಿನ್ ಜತೆ ಡೇಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com