

ಬೆಂಗಳೂರು: ಟೀಂ ಇಂಡಿಯಾದ ನೂತನ ಕೋಚ್ ಅನಿಲ್ ಕುಂಬ್ಳೆ ಅವರಿಗೆ ತಂಡದ ಎಲ್ಲ ಆಟಗಾರರ ಮನಃಸ್ಥಿತಿ ಚೆನ್ನಾಗಿ ತಿಳಿದಿದೆ. ಅವರೊಬ್ಬ ಅತ್ಯುತ್ತಮ ಮನೋಗ್ರಾಹಿ ಎಂದು ಭಾರತ ತಂಡದ ಬ್ಯಾಟ್ಸಮನ್ ಶಿಖರ್ ಧವನ್ ಹೇಳಿದ್ದಾರೆ.
ಪ್ರಸ್ತುತ ಬೆಂಗಳೂರಿನ ಎನ್ ಸಿಎನಲ್ಲಿ ಅನಿಲ್ ಕುಂಬ್ಳೆ ಸಾರಥ್ಯತದಲ್ಲಿ ತರಬೇತಿ ನಡೆಸುತ್ತಿರುವ ಶಿಖರ್ ಧವನ್ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಈ ವೇಳೆ ನೂತನ ಕೋಚ್ ಅನಿಲ್ ಕುಂಬ್ಳೆ ಅವರ ಕಾರ್ಯವೈಖರಿ ಕುರಿತು ಮಾತನಾಡಿದ ಧವನ್, ಅನಿಲ್ ಕುಂಬ್ಳೆ ಉತ್ತಮ ಕೋಚ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಭಾರತ ತಂಡದ ಪ್ರತಿಯೊಬ್ಬ ಆಟಗಾರನ ಮನಃಸ್ಥಿತಿ ಅವರಿಗೆ ಚೆನ್ನಾಗಿ ತಿಳಿದಿದೆ. ಅದಕ್ಕೆ ತಕ್ಕಂತೆ ಅವರು ಗೇಮ್ ಪ್ಲಾನ್ ರೂಪಿಸುತ್ತಾರೆ. ವಿರಾಟ್ ಕೊಹ್ಲಿ ಸೇರಿದಂತೆ ನಾವೆಲ್ಲರೂ ಅನಿಲ್ ಕುಂಬ್ಳೆ ಅವರ ಗೇಮ್ ಪ್ಲಾನ್ ಭಾಗವಷ್ಟೇ ಎಂದು ಶಿಖರ್ ಧವನ್ ಹೇಳಿದರು.
"ಅನಿಲ್ ಕುಂಬ್ಳೆ ಉತ್ತಮ ಮನೋ ಗ್ರಾಹಿಯಾಗಿದ್ದು, ಯಾವ ಆಟಗಾರನೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ನನ್ನ ಪ್ರಕಾರ ಅನಿಲ್ ಭಾಯ್ ತಂಡದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಇನ್ನು ತಂಡದ ನಾಯಕ ವಿರಾಟ್ ಕೊಹ್ಲಿ ಕೇವಲ ತಂಡದ ನಾಯಕ ಮಾತ್ರವಲ್ಲ. ಆತ ತಂಡದ ಪ್ರಮುಖ ಬ್ಯಾಟ್ಸಮನ್ ಕೂಡ ಆಗಿದ್ದಾರೆ. ಹೀಗಾಗಿ ಕೋಚ್ ಅನಿಲ್ ಕುಂಬ್ಳೆ ಈ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಗೇಮ್ ಪ್ಲಾನ್ ರಚಿಸುತ್ತಾರೆ. ಅವರ ಗೇಮ್ ಪ್ಲಾನ್ ನಲ್ಲಿ ನಾವು ಕೆಲ ಭಾಗ ಮಾತ್ರ" ಎಂದು ಧವನ್ ಹೇಳಿದರು.
"ವೆಸ್ಟ್ ಇ೦ಡೀಸ್ ಪ್ರವಾಸಕ್ಕೆ ಅನಿಲ್ ಭಾಯ್ ಹಾಕಿಕೊ೦ಡಿರುವ ಯೋಜನೆಗಳಲ್ಲಿ ಆಟಗಾರರು ಭಾಗಿಯಾಗಿದ್ದೇವೆ. ಆಟಗಾರರು ಈಗಾಗಲೇ ಕು೦ಬ್ಳೆ ಗರಡಿಯಲ್ಲಿ ಆಡಲು ಉತ್ಸುಕರಾಗಿದ್ದಾರೆ. ಅವರ ಅನುಭವವೇ ತ೦ಡದ ಪಾಲಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಆಟಗಾರರ ಮನಸ್ಥಿತಿಯನ್ನು ಕು೦ಬ್ಳೆ ಚೆನ್ನಾಗಿ ಅಥೈ೯ಸಬಲ್ಲರು. ಇದು ಸಾಕಷ್ಟು ಪರಿಣಾಮಕಾರಿಯಾಗಲಿದೆ. ತ೦ಡದಲ್ಲಿ ಉತ್ತಮ ವಾತಾವರಣವಿದ್ದು, ಸರಣಿ ಗೆಲ್ಲುವ ಉತ್ತಮ ಅವಕಾಶ ಹೊ೦ದಿದ್ದೇವೆ. ಕೇವಲ ಬ್ಯಾಟ್ಸ್ ಮನ್‍ಗಳಷ್ಟೆ ಅಲ್ಲ, 7-8ನೇ ಕ್ರಮಾ೦ಕದಲ್ಲೂ ಬೌಲರ್‍ಗಳು ರನ್ ಗಳಿಸಬಲ್ಲರು" ಎ೦ದು ಧವನ್ ಹೇಳಿದರು.