ಅಭ್ಯಾಸ ಪಂದ್ಯದಲ್ಲಿ ಭಾರತೀಯ ಸ್ಪಿನ್ ಪಡೆ ಜಾದೂ; 180ಕ್ಕೆ ಅಧ್ಯಕ್ಷರ ಇಲೆವೆನ್ ಆಲ್ ಔಟ್

ನೂತನ ಕೋಚ್ ಅನಿಲ್ ಕುಂಬ್ಳೆ ಸಾರಥ್ಯದ ಭಾರತ ಟೆಸ್ಟ್ ತಂಡದ ಬೌಲರ್ ಗಳು ಅಭ್ಯಾಸ ಪಂದ್ಯದಲ್ಲಿಯೇ ಅಭೂತ ಪೂರ್ವ ಪ್ರದರ್ಶನ ನೀಡುವ ಮೂಲಕ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ಕೇವಲ 180 ರನ್ ಗಳಿಗೆ ಆಲ್ ಔಟ್ ಮಾಡಿದೆ.
ವಿಕೆಟ್ ಪಡೆದ ಸಂಭ್ರಮದಲ್ಲಿ ಆರ್ ಅಶ್ವಿನ್ (ಕ್ರಿಕ್ ಇನ್ಫೋ ಚಿತ್ರ)
ವಿಕೆಟ್ ಪಡೆದ ಸಂಭ್ರಮದಲ್ಲಿ ಆರ್ ಅಶ್ವಿನ್ (ಕ್ರಿಕ್ ಇನ್ಫೋ ಚಿತ್ರ)
Updated on: 

ಸೇಂಟ್ ಕಿಟ್ಸ್: ನೂತನ ಕೋಚ್ ಅನಿಲ್ ಕುಂಬ್ಳೆ ಸಾರಥ್ಯದ ಭಾರತ ಟೆಸ್ಟ್ ತಂಡದ ಬೌಲರ್ ಗಳು ಅಭ್ಯಾಸ ಪಂದ್ಯದಲ್ಲಿಯೇ ಅಭೂತ ಪೂರ್ವ ಪ್ರದರ್ಶನ ನೀಡುವ ಮೂಲಕ ವೆಸ್ಟ್ ಇಂಡೀಸ್  ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ಕೇವಲ 180 ರನ್ ಗಳಿಗೆ ಆಲ್ ಔಟ್ ಮಾಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಧ್ಯಕ್ಷರ ಇಲೆವನ್ ತಂಡ 180 ರನ್ ಗಳಿಗೆ ಆಲ್ ಔಟ್ ಆಯಿತು. ಆರಂಭದಿಂದಲೇ ಅಧ್ಯಕ್ಷರ ಇಲೆವನ್ ತಂಡದ ಮೇಲೆ ಒತ್ತಡ ಹೇರಿದ ಭಾರತೀಯ  ಬೌಲರ್ ಗಳು ತಂಡದ ಮೊತ್ತ ಕೇವಲ 27 ರನ್ ಗಳಾಗುವಷ್ಟರಲ್ಲಿ ಮೊದಲ ವಿಕೆಟ್ ಪಡೆದರು. ಆರಂಭಿಕ ಆಟಗಾರ ಜಾನ್ಸನ್ ಕೇವಲ 3 ರನ್ ಗಳಿಸಿ ಠಾಕೂರ್ ಗೆ ವಿಕೆಟ್ ಒಪ್ಪಿಸದರು. ಬಳಿಕ  ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಅಧ್ಯಕ್ಷರ ಇಲೆವನ್ ತಂಡ 180 ರನ್ ಗಳಾಗುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಭಾರತದ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಸ್ಪಿನ್ನರ್ ಗಳಾದ ಆರ್ ಅಶ್ವಿನ್ 62 ರನ್ ನೀಡಿ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಕೇವಲ 16 ರನ್ ನೀಡಿ 3 ವಿಕೆಟ್ ಪಡೆದರು.  ಅಂತೆಯೇ ಅಮಿತ್ ಮಿಶ್ರಾ ಕೂಡ 45 ರನ್ ನೀಡಿ 2 ವಿಕೆಟ್ ಪಡೆದರು.

ಪ್ರಸ್ತುತ ಭಾರತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು, 93 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಮುರಳಿ ವಿಜಯ್ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಶಿಖರ್ ಧವನ್ ಕೇವಲ 9 ರನ್ ಗಳಿಸಿ  ಡಾಸ್ ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಕಾರ್ನ್ ವಾಲ್ ಬೌಲಿಂಗ್ ನಲ್ಲಿ 28 ರನ್ ಗಳಿಸಿದ್ದ ಪೂಜಾರಾ ಕ್ಲೀನ್ ಬೋಲ್ಡ್ ಆಗುವುದರೊಂದಿಗೆ ದಿನದಾಟ ಮುಕ್ತಾಯವಾಯಿತು. 30 ರನ್ ಗಳಿಸಿ  ಅಜೇಯರಾಗಿ ಉಳಿದಿರುವ ಕೆಎಲ್ ರಾಹುಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com