ಗುಡ್ ಲಕ್ ಬ್ರದರ್ ಎಂದ ಕೊಹ್ಲಿ, ಅಫ್ರಿದಿ..!

ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಕ್ರೀಡಾಂಗಣದಲ್ಲಿ ಬದ್ಧ ಶತ್ರುಗಳೇ ಇರಬಹುದು ಆದರೆ ಅದು ಕ್ರಿಕೆಟ್ ಅಂಗಳದಲ್ಲಿ ಮಾತ್ರ...
ತರಬೇತಿ ವೇಳೆ ಪರಸ್ಪರ ಹಸ್ತಲಾಘವ ಮಾಡಿದ ಶಾಹಿದ್ ಅಫ್ರಿದಿ ಮತ್ತು ವಿರಾಟ್ ಕೊಹ್ಲಿ
ತರಬೇತಿ ವೇಳೆ ಪರಸ್ಪರ ಹಸ್ತಲಾಘವ ಮಾಡಿದ ಶಾಹಿದ್ ಅಫ್ರಿದಿ ಮತ್ತು ವಿರಾಟ್ ಕೊಹ್ಲಿ
Updated on: 

ಕೋಲ್ಕತಾ: ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಕ್ರೀಡಾಂಗಣದಲ್ಲಿ ಬದ್ಧ ಶತ್ರುಗಳೇ ಇರಬಹುದು ಆದರೆ ಅದು ಕೇವಲ ಕ್ರಿಕೆಟ್ ಅಂಗಳದಲ್ಲಿ ಮಾತ್ರ ಎಂಬುದು ಪದೇ ಪದೇ  ಸಾಬೀತಾಗುತ್ತಿದೆ.

ನಿನ್ನೆಯಷ್ಟೇ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಸುರೇಶ್ ರೈನಾ ಮತ್ತು ಪಾಕಿಸ್ತಾನದ ಆಲ್ ರೌಂಡರ್ ಮತ್ತು ಭಾರತದ ಅಳಿಯ ಶೋಯೆ ಬ್ ಮಲಿಕ್ ನೆಟ್ ಪ್ರಾಕ್ಟಿಸ್ ವೇಳೆ  ಪರಸ್ಪರ ಆಲಂಗಿಸಿಕೊಂಡ ಉಭಯಕುಶಲೋಪರಿ ವಿಚಾರಿಸಿದ್ದರು. ಈ ವಿಚಾರ ವೈರಲ್ ಆದ ಬೆನ್ನಲ್ಲೇ ಮತ್ತೆ ಭಾರತ-ಪಾಕ್ ಸ್ನೇಹದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಭಾರತದ ಭವಿಷ್ಯದ  ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ಅವರನ್ನು ನೆಟ್ ಪ್ರಾಕ್ಟಿಸ್ ವೇಳೆ ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ.

ಇಂದು ಸಂಜೆ ಉಭಯ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯವಿದ್ದು, ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತಿರುವ ಭಾರತದ ಮಟ್ಟಿಗೆ ಸರಣಿಯಲ್ಲಿ ಉಳಿಯಬೇಕಾದರೆ ಈ  ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡವಿದೆ. ಅಂತೆಯೇ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದೆಯಾದರೂ, ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಗೆದ್ದೇ ಇಲ್ಲ ಎಂಬ ಹಣೆ  ಪಟ್ಟಿಕೂಡ ಹೊಂದಿದೆ. ಹೀಗಾಗಿ ಆ ಹಣೆಪಟ್ಟಿಯನ್ನು ತೊಡೆದು ಹಾಕಿ, ಇತಿಹಾಸವನ್ನು ಬದಲಿಸುವ ಪ್ರಯತ್ನವನ್ನು ಖಂಡಿತ ಪಾಕಿಸ್ತಾನ ತಂಡ ಮಾಡಲಿದೆ.

ಇದೇ ಕಾರಣಕ್ಕೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೇರಿದಂತೆ ಇಡೀ ವಿಶ್ವದಲ್ಲಿರುವ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಭಾರಿ ಕುತೂಹಲದಿಂದ ಎದುರುನೋಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com