ಟಿ20 ವಿಶ್ವಕಪ್: ಆಫ್ಗಾನಿಸ್ತಾನ ಮಣಿಸಿದ ದಕ್ಷಿಣ ಆಫ್ರಿಕಾ

ಟಿ20 ವಿಶ್ವಕಪ್ ಪಂದ್ಯಾವಳಿಯ ಆಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದೆ...
ದಕ್ಷಿಣ ಆಫ್ರಿಕಾ, ಆಫ್ಗಾನಿಸ್ತಾನ
ದಕ್ಷಿಣ ಆಫ್ರಿಕಾ, ಆಫ್ಗಾನಿಸ್ತಾನ
Updated on: 

ಮುಂಬೈ: ಟಿ20 ವಿಶ್ವಕಪ್ ಪಂದ್ಯಾವಳಿಯ ಆಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದೆ.

ದಕ್ಷಿಣ ಆಫ್ರಿಕಾ ನೀಡಿದ 210 ರನ್ ಗಳ ಬೆನ್ನಟ್ಟಿದ ಆಫ್ಗಾನಿಸ್ತಾನ ಸಂಘಟಿತ ಹೋರಾಟ ನಡೆಸಿದರು 37 ರನ್ ಗಳ ಅಂತರದಿಂದ ಸೋಲು ಕಂಡಿತು.

ಮೊದಲು ಬ್ಯಾಟ್ ಮಾಡಿದ ಭರ್ಜರಿ 209 ರನ್ ಗಳನ್ನು ಕಲೆ ಹಾಕಿತು. 210 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆಫ್ಗಾನಿಸ್ತಾನ ಉತ್ತಮ ಆರಂಭ ಪಡೆದುಕೊಂಡಿತು. 9.2 ಓವರ್ ಗಳಲ್ಲಿ 100 ರನ್ ಗಡಿ ದಾಟಿತು. ಇದರೊಂದಿಗೆ ಆಫ್ಗಾನಿಸ್ತಾನಕ್ಕೆ ಗೆಲುವಿನ ಆಶಾದಾಯಕ ಚಿಗುರೊಡೆದಿತ್ತು. ಆದರೆ ಆರಂಭಿಕ ಆಟಗಾರರಾದ ಮೊಹಮದ್ ಶಹಜಾದ್ (44) ಮತ್ತು ನೂರ್ ಅಲಿ ಜದ್ರನ್ (25) ಔಟಾದ ನಂತರ ಬಂದ ಬ್ಯಾಟ್ಸ್​ಮನ್​ಗಳು ರನ್​ಗತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ.

ಹೀಗಾಗಿ ಆಫ್ಘಾನಿಸ್ತಾನ ಅಂತಿಮವಾಗಿ 20 ಓವರ್​ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 172 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ 37 ರನ್​ಗಳಿಂದ ಸೋಲನುಭವಿಸಿತು. ದಕ್ಷಿಣ ಆಫ್ರಿಕಾ ಪರ ಕ್ರಿಸ್ ಮೋರಿಸ್ 4, ರಬಾಡ, ತಾಹಿರ್ ಮತ್ತು ಅಬಾಟ್ ತಲಾ 2 ವಿಕೆಟ್ ಪಡೆದರು.

ಆಫ್ರಿಕಾ ಪರ ಆಶೀಮ್ ಆಮ್ಲಾ 5, ಡಿಕಾಕ್ 45, ಡುಫ್ಲೆಸಿಸ್ 41, ಡಿವಿಲಿಯರ್ಸ್ 64, ಮಿಲ್ಲರ್ 19 ರನ್ ಗಳಿಸಿ ಔಟಾದರೆ, ಜೆಪಿ ಡ್ಯುಮಿನಿ ಅಜೇಯ 29 ವೈಸ್ 0 ರನ್ ಗಳಿಸಿದ್ದಾರೆ.

ಆಫ್ಗಾನಿಸ್ತಾನ ಪರ ಆಮೀರ್ ಹಮ್ಜಾ, ದಾವ್ಲತ್ ಝರ್ದಾನ್, ಶಾಪೂರ್ ಝರ್ದಾನ್ ಹಾಗೂ ಮೊಹಮ್ಮದ್ ನಬಿ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com