ನಿವೃತ್ತಿ ನಿರ್ಧಾರದ ಬಗ್ಗೆ ಅಫ್ರೀದಿ ಮತ್ತೆ ಯು ಟರ್ನ್

ಟಾಸ್ ವೇಳೆ ನಿವೃತ್ತಿ ವಿಚಾರದ ಬಗ್ಗೆ ಅಫ್ರೀದಿಯಲ್ಲಿ ಕೇಳಿದಾಗ, ತಾನು ಇಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾನು ನನ್ನ ದೇಶಕ್ಕೆ ಹೋದ...
ಶಾಹಿದ್ ಅಫ್ರೀದಿ
ಶಾಹಿದ್ ಅಫ್ರೀದಿ
Updated on
ಮೊಹಾಲಿ: ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ನಿರ್ಧಾರದ ಬಗ್ಗೆ ಪಾಕಿಸ್ತಾನದ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರೀದಿ ಮತ್ತೆ ಮನಸ್ಸು ಬದಲಿಸಿದ್ದಾರೆ.
ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯದ ಮುನ್ನ ಟಾಸ್ ವೇಳೆ ಅಫ್ರೀದಿ ನಿವೃತ್ತಿ ನಿರ್ಧಾರದ ಬಗ್ಗೆ ತಾನು ಯೋಚಿಸಿಲ್ಲ ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮತ್ತು ಭಾರತದೊಂದಿಗೆ ಪರಾಭವಗೊಂಡಿರುವ ಪಾಕಿಸ್ತಾನಕ್ಕೆ ಶುಕ್ರವಾರ ನಡೆಯುತ್ತಿರುವ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಒಂದು ವೇಳೆ ಇವತ್ತಿನ ಪಂದ್ಯದಲ್ಲಿ ಪಾಕಿಸ್ತಾನ ಸೋತರೆ ಅವರು ಈ ವಿಶ್ವಕಪ್ ಪಂದ್ಯಾಟದಿಂದ ಹೊರಗೆ ನಡೆಯಲೇ ಬೇಕಾಗುತ್ತದೆ.
ಇಂತಿರ್ಪ, ಮ್ಯಾಚ್ ಗೆಲ್ಲಲೇ ಬೇಕಾದ ಒತ್ತಡ ಪಾಕಿಸ್ತಾನದ ಮೇಲಿದೆ. ಟಾಸ್ ವೇಳೆ ನಿವೃತ್ತಿ ವಿಚಾರದ ಬಗ್ಗೆ ಅಫ್ರೀದಿಯಲ್ಲಿ ಕೇಳಿದಾಗ, ತಾನು ಇಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾನು ನನ್ನ ದೇಶಕ್ಕೆ ಹೋದ ನಂತರವೇ ಅದನ್ನು ನಿರ್ಧರಿಸುವೆ ಎಂದು ಹೇಳಿದ್ದಾರೆ.
ಈ ಹಿಂದೆ ನ್ಯೂಜಿಲ್ಯಾಂಡ್ ವಿರುದ್ದ ಪರಾಭವಗೊಂಡಾಗ ತಾನು ಆಸ್ಟ್ರೇಲಿಯಾ ವಿರುದ್ಧ ಆಡುವ ಪಂದ್ಯ ನನ್ನ ವೃತ್ತಿ ಜೀವನದ ಕೊನೆಯ ಪಂದ್ಯವಾಗಲಿದೆ ಎಂದು ಅಫ್ರೀದಿ ಹೇಳಿದ್ದರು. ಅದೇ ವೇಳೆ ಟಿ20 ವಿಶ್ವಕಪ್ ಪಂದ್ಯದ ನಂತರ ಅಫ್ರೀದಿಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ  ಹೇಳಿತ್ತು.
ಪದೇ ಪದೇ ತಾನು ನಿವೃತ್ತಿ ಘೋಷಿಸುತ್ತೇನೆ ಎಂದು ಹೇಳಿ ಅಫ್ರೀದಿ ತಮ್ಮ ನಿರ್ಧಾರ ಬದಲಿಸುತ್ತಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಯಾವ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com