ಶಶಾಂಕ್ ಮನೋಹರ್ ಅವರ ರಾಜಿನಾಮೆ ಹಿನ್ನೆಲೆ ತೆರವುಗೊಂಡಿರುವ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಪೈಪೋಟಿ ಶುರುವಾಗಿದೆ. ಸದ್ಯ ಬಿಸಿಸಿಐನ ಕಾರ್ಯದರ್ಶಿ ಅನುರಾಗ್ ಠಾಕೂರ್, ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಜಯ್ ಶಿರ್ಕೆ ಅವರ ಹೆಸರು ಕೇಳಿಬರುತ್ತಿವೆ. ಈ ಮೂವರ ಪೈಕಿ ಅನುರಾಗ್ ಠಾಕೂರ್ ಹೆಸರು ಮುಂಚೂಣಿಯಲ್ಲಿದೆ. ಇನ್ನು ಬಿಸಿಸಿಐ ನಿಯಮಗಳ ಪ್ರಕಾರ, ಅಧ್ಯಕ್ಷರ ನಿರ್ಗಮನದ 15 ದಿನಗಳಲ್ಲಿ ಸಭೆ ಕರೆದು ಹೊಸ ಅಧ್ಯಕ್ಷರ ಆಯ್ಕೆ ಮಾಡಬೇಕಿರುತ್ತದೆ. ಹೀಗಾಗಿ ಶೀಘ್ರವೇ ಬಿಸಿಸಿಐಗೆ ಹೊಸ ದಳಪತಿಯ ಆಯ್ಕೆ ನಿಚ್ಚಳವಾಗಿದೆ.