ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನೂತನವಾಗಿ ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟ್ಸ್ ಮನ್ ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನ ಪಡೆದಿದ್ದು ತಮ್ಮ ವೃತ್ತಿ ಬದುಕಿನನಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಟೆಸ್ಟ್ ರ್ಯಾಂಕಿಂಗ್ ನಲ್ಲಿ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 167 ಮತ್ತು 81 ರನ್ ಗಳಿಸಿದ್ದು ಟಾಪ್ 10 ಪಟ್ಟಿ ಸೇರಲು ಸಾಧ್ಯವಾಗಿದೆ.
ಟೆಸ್ಟ್ ಬ್ಯಾಟ್ಸ್ ಮನ್ ರ್ಯಾಂಕಿಂಗ್ ನಲ್ಲಿ 800 ಅಂಕಗಳ ಗಡಿ ದಾಟಿದ್ದಾರೆ. ವಿಶಾಖಪಟ್ಟಣಂ ಪಂದ್ಯದಲ್ಲಿನಲ್ಲಿನ ಅದ್ಭುತ ಪ್ರದರ್ಶನ ನೀಡಿ 97 ಅಂಕಗಳನ್ನು ಸಂಪಾದಿಸಿದ್ದಾರೆ.