ನವದೆಹಲಿ: ಬೆನ್ನು ನೋವಿನಿಂದ ಭಾರತ ತಂಡದಿಂದ ದೂರ ಉಳಿದಿದ್ದ ವೇಗಿ ಭುವನೇಶ್ವರ್ ಕುಮಾರ್ ಮತ್ತೆ ತಂಡಕ್ಕೆ ಮರಳಿದ್ದಾರೆ.
ಸಂಪೂರ್ಣವಾಗಿ ಫಿಟ್ ಆಗಿರುವ ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ವಿರುದ್ಧದ ಕೊನೆ ಮೂರು ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆ ಮಾಡಲಾಗಿದ್ದು ದೆಹಲಿ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಕೈಬಿಡಲಾಗಿದ್ದು ಭುವನೇಶ್ವರ್ ಗೆ ಬುಲಾವ್ ನೀಡಲಾಗಿದೆ.
ತಂಡಕ್ಕೆ ಮರಳಬೇಕಾದರೇ ಫಿಟ್ ನೆಸ್ ಸಾಬೀತುಪಡಿಬೇಕು ಎಂದು ಕೋಚ್ ಅನಿಲ್ ಕುಂಬ್ಳೆ ಸೂಚಿಸಿದ್ದು ಅದರಂತೆ ಭುವನೇಶ್ವರ್ ರಣಜಿ ಟೂರ್ನಿಯಲ್ಲಿ ಮುಂಬೈ ತಂಡದ ವಿರುದ್ಧ 36 ಓವರ್ ಮಾಡಿ 80 ರನ್ ಗೆ 2 ವಿಕೆಟ್ ಪಡೆದು ತಮ್ಮ ಫಿಟ್ ನೆಸ್ ಸಾಬೀತು ಪಡಿಸಿದ್ದರು.