ವಿರೇಂದ್ರ ಸೆಹ್ವಾಗ್ ಟೆಸ್ಟ್ ಪಂದ್ಯ ನಿಲ್ಲಿಸಲು ಕಾರಣ ತಿಳಿಯಬೇಕೇ!

ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಟೆಸ್ಟ್ ಪಂದ್ಯವನ್ನು ನಿಲ್ಲಿಸಿದ್ದರ ಬಗ್ಗೆ ಇದೀಗ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ...
ವಿರೇಂದ್ರ ಸೆಹ್ವಾಗ್
ವಿರೇಂದ್ರ ಸೆಹ್ವಾಗ್
Updated on: 
ಮುಂಬೈ: ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಟೆಸ್ಟ್ ಪಂದ್ಯವನ್ನು ನಿಲ್ಲಿಸಿದ್ದರ ಬಗ್ಗೆ ಇದೀಗ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 
2008ರ ಏಪ್ರಿಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಸೆಹ್ವಾಗ್ ತ್ರಿಶತಕ ಸಿಡಿಸಿ ಆರ್ಭಟಿಸಿದ್ದು ಇತಿಹಾಸ. ಈ ವೇಳೆ ಅವರು ತು ಜಾನೆ ನಾ ಹಾಡಿನ ಸಾಹಿತ್ಯ ನೆನಪಾಗದೆ ಬ್ಯಾಟಿಂಗ್ ನಿಲ್ಲಿಸಿದ್ದರಂತೆ. 
ಮತ್ತೊಂದು ಸಂಗತಿ ಎಂದರೆ ಆ ಪಂದ್ಯದಲ್ಲಿ 12ನೇ ಆಟಗಾರನಾಗಿದ್ದ ಇಶಾಂತ್ ಶರ್ಮರನ್ನು ಮೈದಾನಕ್ಕೆ ಕರೆಸಿ, ಹಾಡಿನ ಸಾಹಿತ್ಯವನ್ನು ತನ್ನ ಐಪಾಡಿನಿಂದ ತಿಳಿದುಕೊಂಡು ಬರುವಂತೆ ಸೂಚಿಸಿದ್ದರು. 
ಸೆಹ್ವಾಗ್ ಡ್ರಿಂಕ್ಸ್ ಗಾಗಿ ಇಶಾಂತ್ ರನ್ನು ಕರೆಸಿಕೊಂಡರು ಎಂದು ಎಲ್ಲರೂ ತಿಳಿದಿದ್ದರಂತೆ. 12ನೇ ಆಟಗಾರರನ್ನು ಕೆಲವೊಮ್ಮೆ ಹೀಗೂ ಬಳಸಿಕೊಳ್ಳಬಹುದು ಎಂದು ಸೆಹ್ವಾಗ್ ಸಮಾರಂಭವೊಂದರಲ್ಲಿ ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com