3ನೇ ಟೆಸ್ಟ್: ಭಾರತದ ಬೃಹತ್ ಮೊತ್ತದಾಸೆಗೆ ಇಂಗ್ಲೆಂಡ್ ಬೌಲರ್ ಗಳ ತಣ್ಣೀರು

ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 283 ರನ್ ಗಳಿಗೆ ಕಟ್ಟಿ ಹಾಕಿದ್ದ ಭಾರತ ತಂಡ ಅದೇ ಹುಮ್ಮಸ್ಸಿನಲ್ಲಿ ಬೃಹತ್ ಮೊತ್ತ ಪೇರಿಸಲು ಮುಂದಾಗಿತ್ತಾದರೂ, ಭಾರತ ಬ್ಯಾಟಿಂಗ್ ವೇಗಕ್ಕೆ ಇಂಗ್ಲೆಂಡ್ ಬೌಲರ್ ಗಳು ಕಡಿವಾಣ ಹಾಕಿದ್ದಾರೆ.
ಅರ್ಧಶತಕ ಸಿಡಿಸಿದ ಆರ್ ಅಶ್ವಿನ್ (ಕ್ರಿಕ್ ಇನ್ಫೋ ಚಿತ್ರ)
ಅರ್ಧಶತಕ ಸಿಡಿಸಿದ ಆರ್ ಅಶ್ವಿನ್ (ಕ್ರಿಕ್ ಇನ್ಫೋ ಚಿತ್ರ)
Updated on: 

ಮೊಹಾಲಿ: ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 283 ರನ್ ಗಳಿಗೆ ಕಟ್ಟಿ ಹಾಕಿದ್ದ ಭಾರತ ತಂಡ ಅದೇ ಹುಮ್ಮಸ್ಸಿನಲ್ಲಿ ಬೃಹತ್ ಮೊತ್ತ ಪೇರಿಸಲು ಮುಂದಾಗಿತ್ತಾದರೂ, ಭಾರತ ಬ್ಯಾಟಿಂಗ್ ವೇಗಕ್ಕೆ ಇಂಗ್ಲೆಂಡ್  ಬೌಲರ್ ಗಳು ಕಡಿವಾಣ ಹಾಕಿದ್ದಾರೆ.

ಇಂಗ್ಲೆಂಡ್ ನೀಡಿದ್ದ 283 ರನ್ ಗಳನ್ನು ಬೆನ್ನು ಹತ್ತಿದ ಭಾರತ ತಂಡ ಆರಂಭಿಕ ಆಘಾತದ ಹೊರತಾಗಿಯೂ ಪಾರ್ಥೀವ್ ಪಟೇಲ್ (42 ರನ್), ಪೂಜಾರ (51 ರನ್) ಹಾಗೂ ನಾಯಕ ವಿರಾಟ್ ಕೊಹ್ಲಿ (62 ರನ್) ಅವರ ಉತ್ತಮ  ಬ್ಯಾಟಿಂಗ್ ನ ಫಲವಾಗಿ ಬೃಹತ್ ಮೊತ್ತ ಪೇರಿಸುವ ಮುನ್ಸೂಚನೆ ನೀಡಿತ್ತು. ಆದರೆ ಈ ಹಂತದಲ್ಲಿ ಇಂಗ್ಲೆಂಡ್ ಬೌಲರ್ ಗಳು ಮೇಲುಗೈ ಸಾಧಿಸುವುದರೊಂದಿಗೆ ಭಾರತದ ಬೃಹತ್ ಮೊತ್ತದ ಆಸೆಗೆ ತಣ್ಣೀರೆರಚಿದಂತಾಗಿದೆ. 42  ರನ್ ಗಳಿಸಿ ಆರ್ಧಶತಕ ಹೊಸ್ತಿಲಲ್ಲಿದ್ದ ಪಾರ್ಥೀವ್ ಪಟೇಲ್ ರನ್ನು ರಷೀದ್ ಎಲ್ ಬಿ ಬಲೆಗೆ ಕೆಡವಿದರೆ, ಆಗತಾನೇ ಅರ್ಧಶತಕ ಸಿಡಿಸಿದ್ದ ಪೂಜಾರ ಇದೇ ರಷೀದ್ ಬೌಲಿಂಗ್ ನಲ್ಲಿ ವೋಕ್ಸ್ ಗೆ ಕ್ಯಾಚಿತ್ತು ಹೊರ ನಡೆದರು.

ಇನ್ನು ಉತ್ತಮವಾಗಿ ಆಡುತ್ತಿದ್ದ ನಾಯಕ ವಿರಾಟ್ ಕೊಹ್ಲಿಯನ್ನು ಕೂಡ ಸ್ಟೋಕ್ಸ್ ಔಟ್ ಮಾಡುವುದರೊಂದಿಗೆ ಭಾರತ ತಂಡದ ಮಧ್ಯಮ ಕ್ರಮಾಂಕ ದಿಢೀರ್ ಕುಸಿತಗೊಂಡಿತು. ನಿರೀಕ್ಷೆ ಹುಟ್ಟಿಸಿದ್ದ ಅಂಜಿಕ್ಯಾ ರಹಾನೆ ಶೂನ್ಯಕ್ಕೆ ಔಟ್  ಆಗುತ್ತಿದ್ದಂತೆಯೇ ಭಾರತದ ಬೃಹತ್ ಮೊತ್ತದ ಆಸೆಗೆ ಬ್ರೇಕ್ ಬಿದ್ದಿತು. ಆದರೆ ಈ ಹಂತದಲ್ಲಿ ಕ್ರೀಸ್ ಗೆ ಇಳಿದ ಆಲ್ ರೌಂಡರ್ ಆರ್ ಅಶ್ವಿನ್ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡುವುದರೊಂದಿಗೆ ಭಾರತಕ್ಕೆ ಬೆನ್ನೆಲುಬಾಗಿ  ನಿಂತರು.

ದಿನದಾಂತ್ಯದಲ್ಲಿ ರವೀಂದ್ರ ಜಡೇಜಾರೊಂದಿಗೆ ಕ್ರೀಸ್ ಹಂಚಿಕೊಂಡ ಅಶ್ವಿನ್ ರಕ್ಷಣಾತ್ಮಕ ಆಟದ ಮೊರೆ ಹೋಗಿ ಭಾರತದ ದಿಢೀರ್ ಕುಸಿತವನ್ನು ತಡೆದರು. ಅಂತಿಮವಾಗಿ ಅಶ್ವಿನ್ ಅಜೇಯ 57 ರನ್ ಗಳಿಸಿ ನಾಳೆಗೆ ಕ್ರೀಸ್  ಕಾಯ್ದುಕೊಂಡಿದ್ದರೆ, 31 ರನ್ ಗಳಿಸಿರುವ ಜಡೇಜಾ ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದಾರೆ.

ಇನ್ನು ಇಂಗ್ಲೆಂಡ್ ಪರವಾಗಿ ರಷೀದ್ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ಸ್ಟೋಕ್ಸ್ 2 ವಿಕೆಟ್ ಗಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com