ಕನ್ನಡಿಗ ರಾಹುಲ್ ಗೆ ಮತ್ತೆ ಗಾಯ, ಧವನ್ಗೆ ಬಿಸಿಸಿಐ ಬುಲಾವ್?

ಗಾಯದಿಂದ ಚೇತರಿಸಿಕೊಂಡಿದ್ದ ಕನ್ನಡಿಗ ಕೆಎಲ್ ರಾಹುಲ್ ಮತ್ತೆ ಗಾಯಗೊಂಡಿದ್ದು ತಂಡದಿಂದ ದೂರ ಉಳಿಯಲಿದ್ದಾರೆ...
ಕೆಎಲ್ ರಾಹುಲ್
ಕೆಎಲ್ ರಾಹುಲ್
Updated on: 
ಮೊಹಾಲಿ: ಗಾಯದಿಂದ ಚೇತರಿಸಿಕೊಂಡಿದ್ದ ಕನ್ನಡಿಗ ಕೆಎಲ್ ರಾಹುಲ್ ಮತ್ತೆ ಗಾಯಗೊಂಡಿದ್ದು ತಂಡದಿಂದ ದೂರ ಉಳಿಯಲಿದ್ದಾರೆ. 
ನ್ಯೂಜಿಲೆಂಡ್ ವಿರುದ್ಧದ ಕಾನ್ಪುರ ಟೆಸ್ಟ್ ನಲ್ಲಿ ಸ್ನಾಯುಸೆಳೆತಕ್ಕೆ ತುತ್ತಾಗಿದ್ದ ರಾಹುಲ್ ಆ ಸರಣಿಯ ಕೊನೆಯ 2 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳಲ್ಲೂ ಆಡಿರಲಿಲ್ಲ. ಇದೀ ಮತ್ತೆ ಚೇತರಿಸಿಕೊಂಡು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ರಾಹುಲ್ ಮೊಹಾಲಿ ನಡೆಯಲಿದ್ದ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನೆಟ್ಸ್ ನಲ್ಲಿ ಅಭ್ಯಾಸ ಮಾಡುವ ವೇಳೆ ನೋವಿನ ಅರಿವಾಗಿದ್ದು ಬ್ಯಾಟಿಂಗ್ ಮಾಡಲು ಕಷ್ಟಪಡುತ್ತಿದ್ದರಿಂದ ಬಿಸಿಸಿಐ ಮೆಡಿಕಲ್ ಟೀಮ್, ಸಂಪೂರ್ಣ ಚೇತರಿಕೆ ಕಾಣುವವರೆಗೂ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದೆ ಎಂದು ಟೀಂ ಇಂಡಿಯಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 
10 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯವಾಡಿರುವ ರಾಹುಲ್, ಅನಾರೋಗ್ಯ ಹಾಗೂ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿಯುತ್ತಿರುವುದು ಇದು 3ನೇ ಬಾರಿ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com