ಒಂದೇ ಪಂದ್ಯದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿದ ಧೋನಿ!

ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಜಯಿಸಿದ ಸಂಭ್ರಮ ಒಂದೆಡೆಯಾದರೆ ಒಂದೇ ಪಂದ್ಯದಲ್ಲಿ ಮೂರು ವಿಶ್ವದಾಖಲೆ ನಿರ್ಮಿಸಿದ ಧೋನಿ ಸಾಧನೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಮಹೇಂದ್ರ ಸಿಂಗ್ ಧೋನಿ (ಸಂಗ್ರಹ ಚಿತ್ರ)
ಮಹೇಂದ್ರ ಸಿಂಗ್ ಧೋನಿ (ಸಂಗ್ರಹ ಚಿತ್ರ)
Updated on: 

ಮೊಹಾಲಿ: ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಜಯಿಸಿದ ಸಂಭ್ರಮ ಒಂದೆಡೆಯಾದರೆ ಒಂದೇ ಪಂದ್ಯದಲ್ಲಿ ಮೂರು ವಿಶ್ವದಾಖಲೆ ನಿರ್ಮಿಸಿದ ಧೋನಿ  ಸಾಧನೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಪಂಜಾಬ್ ಮೊಹಾಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ 3 ದಾಖಲೆ ನಿರ್ವಿುಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 150  ಸ್ಟಂಪಿಂಗ್ ಮಾಡಿದ ಮೊದಲ ವಿಕೆಟ್ ಕೀಪರ್ ಎನ್ನುವ ದಾಖಲೆಯನ್ನು ಮೊದಲು ನಿರ್ವಿುಸಿದರೆ, ಬಳಿಕ ಬ್ಯಾಟಿಂಗ್ ವೇಳೆ, 9 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಅಲ್ಲದೆ 3 ಸಿಕ್ಸರ್  ಸಿಡಿಸುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತಿಹೆಚ್ಚು ಸಿಕ್ಸರ್ (196) ಸಿಡಿಸಿರುವ ಭಾರತೀಯ ಆಟಗಾರರ ಪಟ್ಟಿಯಲ್ಲೂ ಧೋನಿ ಸಚಿನ್ ತೆಂಡೂಲ್ಕರ್ (195) ಅವರನ್ನು ಹಿಂದಿಕ್ಕಿದರು.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಧೋನಿ ನ್ಯೂಜಿಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕವು ವಿಶ್ಪಾಸ ಹೊಂದಿದ್ದರು. ಇದೇ ಪಂದ್ಯದಲ್ಲಿ 150ನೇ ಸ್ಪಪಿಂಗ್ ಮಾಡುವ  ಮೂಲಕ ಧೋನಿ ಮತ್ತೊಂದು ದಾಖಲೆ ನಿರ್ಮಿಸಿದರು.149 ಸ್ಟಂಪಿಂಗ್ ದಾಖಲೆಯೊಂದಿಗೆ ಧೋನಿ ಮೊಹಾಲಿ ಪಂದ್ಯದಲ್ಲಿ ಆಡಲಿಳಿದಿದ್ದರು. 29ನೇ ಓವರ್​ನಲ್ಲಿ ಅಮಿತ್​ರ ಮಿಶ್ರಾ ಎಸೆತದಲ್ಲಿ  ರಾಸ್ ಟೇಲರ್​ರನ್ನು ಸ್ಟಂಪ್ ಔಟ್ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 150 ಸ್ಟಂಪಿಂಗ್ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು.

ಸದ್ಯ ಧೋನಿ 444 ಅಂತಾರಾಷ್ಟ್ರೀಯ ಇನಿಂಗ್ಸ್​ಗಳಿಂದ 151 ಸ್ಟಂಪಿಂಗ್ ದಾಖಲೆ ಹೊಂದಿದ್ದಾರೆ. ಈ ಪೈಕಿ  ಏಕದಿನದಲ್ಲಿ 91, ಟೆಸ್ಟ್ ಪಂದ್ಯಗಳಲ್ಲಿ 38 ಹಾಗೂ ಟಿ20 ಪಂದ್ಯಗಳಲ್ಲಿ 22  ಸ್ಟಂಪ್ ಔಟ್ ಮಾಡಿದ್ದಾರೆ. ಪಟ್ಟಿಯಲ್ಲಿ ಶ್ರೀಲಂಕಾದ ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ (139 ಸ್ಟಂಪಿಂಗ್) 2ನೇ ಸ್ಥಾನದಲ್ಲಿದ್ದರೆ, ರೋಮೆಶ್ ಕಲುವಿತರಣ (101) 3ನೇ ಸ್ಥಾನದಲ್ಲಿದ್ದಾರೆ.

9 ಸಾವಿರ ರನ್ ಸಾಧನೆ
ಇದೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸ್ಯಾಂಥ್ನರ್ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಧೋನಿ ಏಕದಿನ ಕ್ರಿಕೆಟ್​ನಲ್ಲಿ 9 ಸಾವಿರ ರನ್ ಬಾರಿಸಿದ 17ನೇ ಬ್ಯಾಟ್ಸ್​ಮನ್ ಎನಿಸಿದರು.  244ನೇ ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡುವ ಮೂಲಕ ಅತಿವೇಗವಾಗಿ 9 ಸಾವಿರ ರನ್ ಸಾಧನೆ ಮಾಡಿದ ವಿಶ್ವದ 6ನೇ ಬ್ಯಾಟ್ಸ್​ಮನ್ ಎನಿಸಿದರು. ವಿಕೆಟ್ ಕೀಪರ್ ಆಗಿ ಗರಿಷ್ಠ ರನ್ ಬಾರಿಸಿದ  ವಿಶ್ವದ 3ನೇ ಆಟಗಾರ ಎಂಬ ಕೀರ್ತಿಗೂ ಧೋನಿ ಭಾಜನರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com