ಕೆಪಿಎಲ್ ಟಿ20: ನಮ್ಮ ಶಿವಮೊಗ್ಗ ವಿರುದ್ಧ ಹುಬ್ಬಳಿಗೆ ಟೈಗರ್ಸ್‌ಗೆ ರೋಚಕ ಜಯ

ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) 5ನೇ ಆವೃತ್ತಿಯಲ್ಲಿ ನಮ್ಮ ಶಿವಮೊಗ್ಗ ತಂಡದ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ರೋಚಕ ಜಯ ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ...
ಹುಬ್ಬಳ್ಳಿ ಟೈಗರ್ಸ್
ಹುಬ್ಬಳ್ಳಿ ಟೈಗರ್ಸ್

ಹುಬ್ಬಳ್ಳಿ: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) 5ನೇ ಆವೃತ್ತಿಯಲ್ಲಿ ನಮ್ಮ ಶಿವಮೊಗ್ಗ ತಂಡದ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ರೋಚಕ ಜಯ ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕುನಾಲ್ ಕಪೂರ್ ಸಾರಥ್ಯದ ಅತಿಥೇಯ ತಂಡ ನಮ್ಮ ಶಿವಮೊಗ್ಗ ವಿರುದ್ಧ 2 ವಿಕೆಟ್ ಗಳಿಂದ ಜಯ ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಹುಬ್ಬಳ್ಳಿ ತಂಡ 19 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ದಾಖಲಿಸಿತು. 134 ರನ್ ಗಳ ಗುರಿ ಬೆನ್ನಟ್ಟಿದ ನಮ್ಮ ಶಿವಮೊಗ್ಗ 6 ವಿಕೆಟ್ ನಷ್ಟಕ್ಕೆ 129 ಗಳಿಸಿ 4 ರನ್ ಗಳಿಂದ ರೋಚಕ ಸೋಲು ಅನುಭವಿಸಿತು.

ಹುಬ್ಬಳ್ಳಿ ಟೈಗರ್ಸ್ ಪರ ಕುನಾಲ್ ಕಪೂರ್ 35, ಮೊಹಮ್ಮದ್ ತಾಹ 23, ವಿನು ಪ್ರಸಾದ್ 22 ಗಳಿಸಿದ್ದಾರೆ. ಇನ್ನು ನಮ್ಮ ಶಿವಮೊಗ್ಗ ಪರ ಅಬ್ರಾರ್ ಖಾಜಿ 3, ಜೀಶನ್ 1 ವಿಕೆಟ್ ಪಡೆದಿದ್ದಾರೆ.

ನಮ್ಮ ಶಿವಮೊಗ್ಗ ಪರ ಸಾದಿಕ್ ಕಿರ್ಮಾನಿ 69, ನಿಕಿನ್ ಜೋಸ್ 37, ಸ್ಟುವರ್ಟ್ ಬಿನ್ನಿ 11 ರನ್ ಗಳಿಸಿದರೆ, ಹುಬ್ಬಳ್ಳಿ ಟೈಗರ್ಸ್ ಪರ ಎಸ್ ಅರವಿಂದ್ 3, ಸ್ಟ್ಯಾಲಿನ್ ಹೂವರ್ 2 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com