ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಯ್ಲ್ ಪಂದ್ಯ ಆರಂಭಿಸಿದರು. 22 ರನ್ ಗಳಿಸಿದ್ದ ಕ್ರಿಸ್ ಗೇಯ್ಲ್ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಕೀಪರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಅರ್ಧ ಶತಕ ಸಿಡಿಸಿದ್ದ ಕೊಹ್ಲಿ(62) ಮೆಕ್ಲನ್ ಘನ್ ಎಸೆತದಲ್ಲಿ ಬಟ್ಲರ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ಬಂದ ಎಬಿಡಿ 19 ರನ್ ಗಳಿಸಿದ್ದೆ ತಂಡ ಅಧಿಕ ಮೊತ್ತವಾಗಿದೆ.