ಬೆಂಗಳೂರು ಪಂದ್ಯ: ಮುಂಬೈಗೆ 143 ರನ್ ಗುರಿ, 11 ರನ್‍ಗೆ 4 ವಿಕೆಟ್ ಪತನ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ 12ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು...
ಆರ್ಸಿಬಿ
ಆರ್ಸಿಬಿ
Updated on: 
ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ 12ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿದ್ದು ಮುಂಬೈ ಗೆಲ್ಲಲು 143 ರನ್ ಗಳ ಗುರಿ ನೀಡಿದೆ. 
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ 142 ರನ್ ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 62 ರನ್ ಸಿಡಿಸಿದ್ದಾರೆ. ಇನ್ನು ಗೇಯ್ಲ್ 22 ರನ್ ಗಳಿಸಿದ್ದರೆ ಎಬಿಡಿ ವಿಲಿಯರ್ಸ್ 19 ರನ್ ಗಳಿಸಿ ಪೆಲಿವಿಯನ್ ಸೇರಿದರು. 
ಆರ್ಸಿಬಿ ನೀಡಿದ 143 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಗೆ ಆರಂಭಿಕ ಆಘಾತವಾಗಿದೆ. 11 ರನ್ ಗಳಿಗೆ ಪ್ರಮುಖ 4 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಪಾರ್ಥಿವ್ ಪಟೇಲ್ 3, ಜೋಸ್ ಬಟ್ಲರ್ 2, ನಾಯಕ ರೋಹಿತ್ ಶರ್ಮಾ ಮತ್ತು ಮೇಕ್ಲನ್ ಘನ್ ಶೂನ್ಯಕ್ಕೆ ಔಟಾಗಿದ್ದಾರೆ. ಸದ್ಯ ಕೀರನ್ ಪೋಲಾರ್ಡ್ ನಿತೀಶ್ ರಾಣಾ ಬ್ಯಾಟಿಂಗ್ ಮಾಡುತ್ತಿದ್ದಾರೆ. 
ಆರ್ಬಿಸಿ ಪರ ಬದ್ರೆ 3, ಸ್ಟುವರ್ಟ್ ಬಿನ್ನಿ 1 ವಿಕೆಟ್ ಗಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com