ದೆಹಲಿ ವಿರುದ್ಧ ಪಂಜಾಬ್ ಗೆ 10 ವಿಕೆಟ್ ಗಳ ಭರ್ಜರಿ ಜಯ!

ನಿರೀಕ್ಷೆಯಂತೆಯೇ ದೆಹಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಕ್ರಿಕ್ ಇನ್ಫೋ ಚಿತ್ರ
ಕ್ರಿಕ್ ಇನ್ಫೋ ಚಿತ್ರ

ಚಂಡೀಘಡ: ನಿರೀಕ್ಷೆಯಂತೆಯೇ ದೆಹಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಚಂಡೀಘಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದೆಹಲಿ ತಂಡ ನೀಡಿದ 68 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ ಕೇವಲ 7.5 ಓವರ್ ಗಳಲ್ಲಿಯೇ 68 ರನ್ ಗಳಿಸುವ ಮೂಲಕ 10 ವಿಕೆಟ್ ಗಳ  ಭರ್ಜರಿ ಜಯ ಸಾಧಿಸಿದೆ. ಅಮೋಘ ಬೌಲಿಂಗ್ ಪ್ರದರ್ಶನದ ಮೂಲಕ ದೆಹಲಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಪಂಜಾಬ್ ತಂಡ ಬಳಿಕ ಬ್ಯಾಟಿಂಗ್ ನಲ್ಲಿಯೂ ಪಾರಮ್ಯ ಮೆರೆದು ದೆಹಲಿ ತಂಡಕ್ಕೆ ಭಾರಿ ಆಘಾತ ನೀಡಿದೆ.

ಪಂಜಾಬ್ ತಂಡದ ಆರಂಭಿಕರಾದ ಮಾರ್ಟಿನ್ ಗಪ್ಟಿಲ್ ಮತ್ತು ಹಶೀಮ್ ಆಮ್ಲಾ ಅವರ ಅಮೋಘ ಜೊತೆಯಾಟದ ನೆರವಿನಿಂದ ಪಂಜಾಬ್ ತಂಡ ದೆಹಲಿ ವಿರುದ್ಧ 10 ವಿಕೆಟ್ ಗಳ ಜಯ ದಾಖಲಿಸಿದೆ. ಸ್ಫೋಟಕ ಬ್ಯಾಟಿಂಗ್  ಪ್ರದರ್ಶನ ನೀಡಿದ ಮಾರ್ಟಿನ್ ಗಪ್ಟಿಲ್ ಕೇವಲ 27 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ ಅಜೇಯ 50 ರನ್ ಗಳಿಸಿದರು. ಅಂತೆಯೇ ಗಪ್ಟಿಲ್ ಉತ್ತಮ ಸಾಥ್ ನೀಡಿದ ಆಮ್ಲಾ 20 ಎಸೆತಗಳಲ್ಲಿ 16 ರನ್  ಗಳಿಸಿದರು.

ಅಂತಿಮವಾಗಿ ಪಂಜಾಬ್ ತಂಡ ಕೇವಲ 7.5 ಓವರ್ ಗಳಲ್ಲಿ 68 ರನ್ ಗಳಿಸಿ 10 ವಿಕೆಟ್ ಗಳ ಜಯ ಸಾಧಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com