1 ಓವರ್ ನಲ್ಲಿ ಆರು ವಿಕೆಟ್...ಇದು ಬಾಲಕನ ವಿರಳ ಸಾಧನೆ!

ಇಂಗ್ಲೆಂಡ್ ನ 13 ವರ್ಷದ ಶಾಲಾ ಬಾಲಕ ಲೂಕ್ ರಾಬಿನ್ಸನ್ ಒಂದೇ ಓವರ್ ನಲ್ಲಿ ಆರು ವಿಕೆಟ್ ಕಬಳಿಸಿದ ವಿರಳ ದಾಖಲೆ ಮಾಡಿದ್ದಾನೆ...
ವಿಕೆಟ್
ವಿಕೆಟ್
ಲಂಡನ್: ಇಂಗ್ಲೆಂಡ್ ನ 13 ವರ್ಷದ ಶಾಲಾ ಬಾಲಕ ಲೂಕ್ ರಾಬಿನ್ಸನ್ ಒಂದೇ ಓವರ್ ನಲ್ಲಿ ಆರು ವಿಕೆಟ್ ಕಬಳಿಸಿದ ವಿರಳ ದಾಖಲೆ ಮಾಡಿದ್ದಾನೆ. 
ಡುರಾಮ್ ಸಿಟಿಯ ಲಾಂಗ್ಲಿ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಫಿಲಿಡೆಲ್ಫಿಯಾ ಕ್ರಿಕೆಟ್ ಕ್ಲಬ್ ಪರ ಆಡಿದ ಲೂಕ್ ಆರು ಎಸೆತಗಳಲ್ಲಿ ಎಲ್ಲಾ ಬೌಲ್ಡ್ ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾನೆ. 
ಕಾಕತಾಳೀಯ ಎಂದರೆ ಲೂಕ್ ಬೌಲಿಂಗ್ ಮಾಡುವ ವೇಳೆ ಮುಖ್ಯ ಅಂಪೈರ್ ಆಗಿದ್ದ 45 ವರ್ಷದ ಸ್ಟೀಫನ್ ಲೂಕ್ ರಾಬಿನ್ಸನ್ ಅವರು ತಂದೆ ಸ್ಟೀಫನ್. ತಂದೆಯ ಎದುರೇ ಮಗ ಇಂತಹ ಸಾಧನೆಯೊಂದನ್ನು ಮಾಡಿರುವುದು ನಿಜಕ್ಕೂ ಶ್ರೇಷ್ಠ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಇದು ಅಧಿಕೃತವಲ್ಲದಿದ್ದರೂ ಕ್ರಿಕೆಟ್ ಇತಿಹಾಸದ ಅಪರೂಪದ ದಾಖಲೆಯಾಗಿದೆ. ಆಸ್ಟ್ರೇಲಿಯಾದ ಕ್ಲಬ್ ಕ್ರಿಕೆಟರ್ ಅಲೆಡ್ ಕ್ಯಾರಿ ಕಳೆದ ಜನವರಿಯಲ್ಲಿ ಒಂದು ಓವರ್ ನಲ್ಲಿ 6 ವಿಕೆಟ್ ಕಬಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com