ಕ್ರಿಕೆಟ್

300ನೇ ಏಕದಿನ ಪಂದ್ಯಕ್ಕೆ ಮಾಜಿ ನಾಯಕ ಎಂಎಸ್ ಧೋನಿ ಸಜ್ಜು!

300ನೇ ಏಕದಿನ ಪಂದ್ಯಕ್ಕೆ ಮಾಜಿ ನಾಯಕ ಎಂಎಸ್ ಧೋನಿ ಸಜ್ಜು!
ಎಂಎಸ್ ಧೋನಿ
Published On :
ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಳೆ ತಮ್ಮ 300ನೇ ಏಕದಿನ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. 
ಮೂರು ಮಾದರಿಗಳಲ್ಲೂ ಅದ್ಭುತ ಪ್ರದರ್ಶನ ನೀಡಿರುವ ಎಂಎಸ್ ಧೋನಿ ಶ್ರೀಲಂಕಾ ವಿರುದ್ಧದ ನಾಳಿನ ಪಂದ್ಯದ ಮೂಲಕ 300ನೇ ಏಕದಿನ ಪಂದ್ಯವನ್ನು ಆಡಲಿದ್ದಾರೆ. 
300ನೇ ಏಕದಿನ ಪಂದ್ಯವಾಡುವ ಮೂಲಕ ಭಾರತೀಯ ಆಟಗಾರರ ಪೈಕಿ ಆರನೇ ಆಟಗಾರನಾಗಲಿದ್ದಾರೆ. ಸದ್ಯ ಧೋನಿ 299 ಪಂದ್ಯಗಳ ಪೈಕಿ 9608 ರನ್ ಗಳನ್ನು ಪೇರಿಸಿದ್ದಾರೆ. ಸಚಿನ್ ತೆಂಡೂಲ್ಕರ್(463), ರಾಹುಲ್ ದ್ರಾವಿಡ್(344), ಮೊಹಮ್ಮದ್ ಅಜರುದ್ದೀನ್(334), ಸೌರವ್ ಗಂಗೂಲಿ(311) ಮತ್ತು ಯುವರಾಜ್ ಸಿಂಗ್(304) ಪಂದ್ಯಗಳನ್ನು ಆಡಿದ್ದಾರೆ. 
ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸಿರುವ ಧೋನಿ 2011ರಲ್ಲಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಿಸಿಕೊಟ್ಟ ಸಾಧನೆ ಮಾಡಿದ್ದಾರೆ. ಇನ್ನು ನಾಯಕನಾಗಿ 199 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಧೋನಿ ಈ ಪೈಕಿ 110 ಪಂದ್ಯಗಳಲ್ಲಿ ಗೆಲುವು ತಂದಿದ್ದು 74 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.