ಕನ್ನಡಿಗರ ಅಬ್ಬರದ ಬ್ಯಾಟಿಂಗ್: ಮೊದಲ ಟಿ20 ಪಂದ್ಯದಲ್ಲಿ 180 ರನ್ ಪೇರಿಸಿದ ಭಾರತ

ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ನಿಗದಿತ ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 180 ರನ್ ಪೇರಿಸಿದೆ...
ಕೆಎಲ್ ರಾಹುಲ್-ಮನೀಶ್ ಪಾಂಡೆ
ಕೆಎಲ್ ರಾಹುಲ್-ಮನೀಶ್ ಪಾಂಡೆ
Updated on: 
ಕಟಕ್: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ನಿಗದಿತ ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 180 ರನ್ ಪೇರಿಸಿದೆ. 
ಕಟಕ್ ನ ಬರಬಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 180 ರನ್ ಪೇರಿಸಿದ್ದು ಲಂಕಾಗೆ 181 ರನ್ ಗುರಿ ನೀಡಿದೆ. 
ಟೀಂ ಇಂಡಿಯಾ ಪರ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಅಬ್ಬರದ ಬ್ಯಾಟಿಂಗ್ ನಿಂದಾಗಿ ತಂಡ ಉತ್ತಮ ರನ್ ಕಲೆ ಹಾಕಲು ಸಾಧ್ಯವಾಯಿತು. ತಂಡದ ನಾಯಕ ರೋಹಿತ್ ಶರ್ಮಾ 17, ಕೆಎಲ್ ರಾಹುಲ್ 61, ಶ್ರೇಯಸ್ ಅಯ್ಯರ್ 24, ಎಂಎಸ್ ಧೋನಿ ಅಜೇಯ 39 ಹಾಗೂ ಮನಿಶ್ ಪಾಂಡೆ ಅಜೇಯ 32 ರನ್ ಸಿಡಿಸಿದ್ದಾರೆ. 
ಶ್ರೀಲಂಕಾ ಪರ ಮ್ಯಾಥ್ಯೂಸ್, ಪೆರೇರಾ ಮತ್ತು ಫರ್ನಾಂಡೋ ತಲಾ 1 ವಿಕೆಟ್ ಪಡೆದಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com