ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರ ಪತ್ನಿ ಮತ್ತು ಮಕ್ಕಳನ್ನು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಗೆ ಹೋಗುವ ವಿಮಾನಕ್ಕೆ ಸಂಪರ್ಕ ಕಲ್ಪಿಸುವ ವಿಮಾನವನ್ನು ದುಬೈನಲ್ಲಿ ಎಮಿರೇಟ್ಸ್ ಏರ್ ಲೈನ್ಸ್ ನವರು ಹತ್ತಲು ಬಿಡದೆ ತಡೆ ಹಿಡಿದ ಘಟನೆ ವರದಿಯಾಗಿದೆ.
ಎಮಿರೇಟ್ಸ್ ಏರ್ ಲೈನ್ಸ್ ಸಿಬ್ಬಂದಿ ಧವನ್ ಪತ್ನಿ ಏಶಾ ಮತ್ತು ಮಕ್ಕಳ ಬರ್ತ್ ಸರ್ಟಿಫಿಕೇಟ್ ತೋರಿಸುವಂತೆ ಹಠ ಹಿಡಿದರು. ಆ ವೇಳೆ ಅವರ ಬಳಿ ಸರ್ಟಿಫಿಕೇಟ್ ಇಲ್ಲದಿದ್ದರಿಂದ ಕೇಪ್ ಟೌನ್ ಗೆ ಹೋಗುವ ವಿಮಾನವನ್ನು ಏರಲು ಅವರಿಗೆ ಸಾಧ್ಯವಾಗಲಿಲ್ಲ.
ನಂತರ ದೆಹಲಿಯಿಂದ ಸರ್ಟಿಫಿಕೇಟ್ ಗಳು ಬರುವ ತನಕವೂ ಏಶಾ ಮತ್ತು ಮಕ್ಕಳು ದುಬೈ ವಿಮಾನ ನಿಲ್ದಾಣದಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಬೇರೆ ವಿಮಾನ ಹಿಡಿದು ಕೇಪ್ ಟೌನ್ ಗೆ ಪ್ರಯಾಣ ಬೆಳೆಸಿದರು.
ಇನ್ನು ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಶಿಖರ್ ಧವನ್ ಎಮಿರೇಟ್ಸ್ ಏರ್ ಲೈನ್ಸ್ ನ ಈ ರೀತಿಯ ವರ್ತನೆ ವೃತ್ತಿಪರತೆಗೆ ತಕ್ಕದಲ್ಲದ ನಡೆ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
1/2.Absolutely unprofessional from @emirates. Was on my way 2 SA with my fam & was told tht my wife and kids can't board the flight from Dubai to SA. Was asked to produce birth certificates & other documents fr my kids at the airport which we obviously didn't have at that moment.