ನಾಲ್ಕನೇ ದಿನವಾದ ಇಂದು ದ್ವಿತೀಯ ಇನ್ನಿಂಗ್ಸ್ ಪ್ರಾರಂಭಿಸಿದ ಟೀಂ ಇಂಡಿಯಾ ನಾಲ್ಕು ವಿಕೆಟ್ ನಷ್ಟಕ್ಕೆ 159 ಸಿಡಿಸಿತು. ನಂತರ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಇದರೊಂದಿಗೆ ಬಾಂಗ್ಲಾದೇಶ ಗೆಲ್ಲಲು 459 ರನ್ ಗಳ ಬೃಹತ್ ಗುರಿ ಪಡೆದಿದೆ. ಈ ಪಂದ್ಯವನ್ನು ಭಾರತ ಕೈವಶ ಮಾಡಿಕೊಳ್ಳಬೇಕಾದರೆ ಬಾಂಗ್ಲಾದೇಶವನ್ನು ಆಲೌಟ್ ಮಾಡಬೇಕಿದೆ.