ಪುಣೆ ಟೆಸ್ಟ್ ಪಂದ್ಯ ಹೀನಾಯ ಸೋಲಿನ ಬಳಿಕ ವಿರಾಟ್ ಕೊಹ್ಲಿ ಪಡೆ ಟ್ರೆಕ್ಕಿಂಗ್

ಪುಣೆಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 333 ರನ್ ಗಳ ಹೀನಾಯ ಸೋಲು ಕಂಡಿದ್ದು ಇದೀಗ ಸೋಲಿನ ನೋವಿನಿಂದ ಹೊರಬರಲು...
ಟೀಂ ಇಂಡಿಯಾ ಆಟಗಾರರು
ಟೀಂ ಇಂಡಿಯಾ ಆಟಗಾರರು
Updated on: 
ಪುಣೆಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 333 ರನ್ ಗಳ ಹೀನಾಯ ಸೋಲು ಕಂಡಿದ್ದು ಇದೀಗ ಸೋಲಿನ ನೋವಿನಿಂದ ಹೊರಬರಲು ವಿರಾಟ್ ಕೊಹ್ಲಿ ಪಡೆ ಟ್ರೆಕ್ಕಿಂಗ್ ಮೊರೆ ಹೋಗಿದೆ. 
ಪುಣೆಯಿಂದ 80 ಕಿಮೀ ದೂರದ ತಮ್ಹಿನ್ ಘಾಟ್ ಗೆ ಟ್ರೆಕ್ಕಿಂಗ್ ತೆರಳಿರುವ ಟೀಂ ಇಂಡಿಯಾದ ಕೆಲ ಆಟಗಾರರು ಟ್ವಿಟರ್ ನಲ್ಲಿ ಚಿತ್ರಗಳನ್ನು ಪ್ರಕಟಿಸುವ ಮೂಲಕ ಇದನ್ನು ಬಹಿರಂಗಪಡಿಸಿದ್ದಾರೆ. 
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಗುಡ್ಡದ ಮೇಲೆ ಕುಳಿತಿರುವ ಚಿತ್ರ ಪ್ರಕಟಿಸಿ ಪ್ರತಿದಿನವೂ ಒಂದು ಹಾರೈಕೆ ಮತ್ತು ಅವಕಾಶ. ಅದಕ್ಕೆ ಕೃತಜ್ಞರಾಗಿರಿ ಮತ್ತು ಮುಂದೆ ಸಾಗುತ್ತಿರಿ ಎಂಬ ಅಡಿಬರಹ ನೀಡಿದ್ದಾರೆ. 
ಇನ್ನು ರವೀಂದ್ರ ಜಡೇಜಾ ರಾಷ್ಟ್ರಧ್ವಜದೊಂದಿಗೆ ಪೋಸ್ ನೀಡಿದ್ದಾರೆ. ಅಜಿಂಕ್ಯ ರಹಾನೆ ಮತ್ತು ಉಮೇಶ್ ಯಾದವ್ ಪತ್ನಿ ಸಮೇತರಾಗಿ ಟ್ರೆಕ್ಕಿಂಗ್ ನಲ್ಲಿ ಪಾಲ್ಗೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com