ವಿಶ್ವಕಪ್'ನಲ್ಲಿ ಭಾರತವನ್ನು ಮುನ್ನಡೆಸುವುದು ಜೀವನದ ದೊಡ್ಡ ಸಾಧನೆ: ವಿರಾಟ್ ಕೊಹ್ಲಿ

ವಿಶ್ವಕಪ್ ನಲ್ಲಿ ಭಾರತವನ್ನು ಮುನ್ನಡೆಸುವುದು ನನ್ನ ಜೀವನದ ದೊಡ್ಡ ಸಾಧನೆಯಾಗಿದೆ ಎಂದು ಟೀಂ ಇಂಡಿಯಾದ ಭಾವಿ ನಾಯಕ ವಿರಾಟ್ ಕೊಹ್ಲಿಯವರು ಭಾನುವಾರ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 

ನವದೆಹಲಿ: ವಿಶ್ವಕಪ್ ನಲ್ಲಿ ಭಾರತವನ್ನು ಮುನ್ನಡೆಸುವುದು ನನ್ನ ಜೀವನದ ದೊಡ್ಡ ಸಾಧನೆಯಾಗಿದೆ ಎಂದು ಟೀಂ  ಇಂಡಿಯಾದ ಭಾವಿ ನಾಯಕ ವಿರಾಟ್ ಕೊಹ್ಲಿಯವರು ಭಾನುವಾರ ಹೇಳಿದ್ದಾರೆ.

ಸೀಮಿತ ಓವರ್ ಗಳ ಪಂದ್ಯದ ನಾಯಕ ಸ್ಥಾನಕ್ಕೆ ಮಹೇಂದ್ರ ಸಿಂಗ್ ಧೋನಿ ಅವರು ನಿವೃತ್ಥಿ ಘೋಷಿಸಿದ್ದು, ಹೀಗಾಗಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ವಿರಾಟ್ ಕೊಹ್ಲಿಯವರನ್ನು ನಾಯಕರಾಗಿ ಆಯ್ಕೆ ಮಾಡಲಾಗಿದೆ.

ಬಿಸಿಸಿಐ ಟಿವಿಯಲ್ಲಿ ಮಾತನಾಡಿರುವ ಅವರು, ವಿಶ್ವಕಪ್ ಕಪ್ ನನ್ನಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. 1 ವಿಶ್ವಕಪ್ ಪಂದ್ಯಾವಳಿ ಹಾಗೂ 2 ಟಿ20 ವಿಶ್ವಕಪ್ ಕಪ್ ಪಂದ್ಯಾವಳಿಗಳನ್ನು ಆಡಿದ್ದೇನೆ. ಆದರೆ, ಭಾರತ ತಂಡದ ನಾಯಕನಾಗಿ ವಿಶ್ವಕಪ್ ಆಡುವುದು ನನ್ನ ಜೀವನದ ದೊಡ್ಡ ಸಾಧನೆಯೆಂದೇ ಹೇಳಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತ ತಂಡದ ನಾಯಕ ಸ್ಥಾನಕ್ಕೆ ನಾನು ಅರ್ಹ ಎಂದು ಅವಕಾಶ ನೀಡಿರುವ ಮಹೇಂದ್ರ ಸಿಂಗ್ ಧೋನಿಯವರಿಗೆ ಕೊಹ್ಲಿಯವರು ಧನ್ಯವಾದ ಹೇಳಿದ್ದಾರೆ.

ನನಗೆ ಅವಕಾಶ ದೊರಕಿರುವುದಕ್ಕೆ ಬಹಳ ಸಂಸತವಾಗುತ್ತಿದೆ. ಧೋನಿಯವರಿಗೆ ಈ ಮೂಲಕ ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತೇನೆ. ತಂಡವನ್ನು ಹೇಗೆ ನೋಡಿಕೊಳ್ಳಬೇಕು ಹಾಗೂ ನಾಯಕತ್ವದ ಕುರಿತಾಗಿ ಧೋನಿಯವರಿಂದ ಸಾಕಷ್ಟು ಕಲಿತಿದ್ದೇನೆ.

ಬದಲಾವಣೆಗಳ ಬಗ್ಗೆ ಎಂದಿಗೂ ಆಲೋಚಿಸಿರಲಿಲ್ಲ. ಭಾರತ ತಂಡಕ್ಕಾಗಿ ಒಬ್ಬ ಆಟಗಾರನಾಗಿ ಉತ್ತಮವಾಗಿ ಆಡುತ್ತಿದ್ದೆ. ಇದೀಗ ನಾಯಕತ್ವ ಜವಾಬ್ದಾರಿ ಬಂದಿದೆ. ದೇಶಕ್ಕಾಗಿ ಆಡಬೇಕೆಂಬುದು ಪ್ರತೀಯೊಂದು ಮಗುವಿನ ಕನಸ್ಸಾಗಿರುತ್ತದೆ. ಆದರೆ, ನನಗೆ ನಾಯಕತ್ವ ಸ್ಥಾನ ಸಿಕ್ಕಿರುವುದು ಜೀವನದ ಅತೀದೊಡ್ಡ ಸಾಧನೆಯಾಗಿದೆ.

ಧೋನಿ ಎಂದಿಗೂ ನನಗೆ ನಾಯಕನಾಗಿಯೇ ಇರುತ್ತಾರೆ. ತಂಡದಿಂದ ಹೊರಹಾಕಬೇಕಾದ ಪರಿಸ್ಥಿತಿ ಬಂದಾಗ ಧೋನಿಯವರು ನನ್ನು ಉಳಿಸಿಕೊಂಡಿದ್ದಾರೆ. ಅವರನ್ನು ಎಂದಿಗೂ ನಾನು ನೆನೆಯುತ್ತೇನೆಂದು ಹೇಳಿಕೊಂಡಿದ್ದಾರೆ.

2008ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಗೆ ಮಹೇಂದ್ರ ಸಿಂಗ್ ಧೋಯವರು ನಾಯಕರಾಗಿದ್ದರು. ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವರು ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. 2014ರಲ್ಲಿ ಧೋನಿ ಟೆಸ್ಟ್ ಗೆ ನಿವೃತ್ತಿ ಘೋಷಿಸಿದ ಬಳಿಕ ಕೊಹ್ಲಿಯವರೇ ನಾಯಕರಾಗಿದ್ದರು. ಇತ್ತೀಚೆಗೆ ಸೀಮಿತ ಓವರ್ ಗಳ ಪಂದ್ಯಕ್ಕೂ ಧೋನಿಯವರು ನಿವೃತ್ತಿ ಘೋಷಿಸಿದ್ದು, ಹೀಗಾಗಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಕೊಹ್ಲಿ ನಾಯಕರಾಗಿ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com