ಕ್ಲಬ್ ಪಂದ್ಯವೊಂದರಲ್ಲಿ 1 ಓವರ್‌ನಲ್ಲಿ 6 ವಿಕೆಟ್ ಪಡೆದ ಆಸ್ಟ್ರೇಲಿಯಾ ಬೌಲರ್

Published On :
ಮುಂಬೈ: ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದೇ ದೊಡ್ಡ ಸಾಧನೆ ಅಂತಹದರಲ್ಲಿ ಆಸ್ಟ್ರೇಲಿಯಾ ಕ್ಲಬ್ ಬೌಲರ್ ಒಬ್ಬ ಸತತ 6 ಎಸೆತಗಳಲ್ಲಿ 6 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ವಿಕ್ಟೋರಿಯಾದಲ್ಲಿ ನಡೆದ ಕ್ಲಬ್ ಪಂದ್ಯದಲ್ಲಿ ಗೋಲ್ಡನ್ ಪಾಯಿಂಟ್ ಪರ ಆಡುತ್ತಿದ್ದ ಅಲೆಡ್ ಕ್ಯಾರಿ ಈಸ್ಟ್ ಬಲ್ಲರಾಟ್ ತಂಡದ 6 ಮಂದಿಯನ್ನು ಸತತ 6 ಎಸೆತಗಳಲ್ಲಿ ಔಟ್ ಮಾಡಿದ್ದಾರೆ.
ಬ್ಯಾಟಿಂಗ್ ಮಾಡುತ್ತಿದ್ದ ಬಲ್ಲರಾಟ್ 2 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿತ್ತು. 8 ಓವರ್ ಗಳನ್ನು ಮಾಡಿದ್ದ ಅಲೆಡ್ ಕ್ಯಾರಿ ಒಂದು ವಿಕೆಟ್ ಪಡೆದಿರಲಿಲ್ಲ. ಆದರೆ 9ನೇ ಓವರ್ ನಲ್ಲಿ ಪವಾಡ ಮಾಡಿಬಿಟ್ಟರು. ಮೊದಲ ಮೂರು ವಿಕೆಟ್ ಗಳನ್ನು ಕ್ಯಾಚ್ ಮೂಲಕ ಪಡೆದ ಅವರು ಉಳಿದ ಮೂರು ವಿಕೆಟ್ ಗಳನ್ನು ಕ್ಲೀನ್ ಬೌಲ್ಡ್ ಮಾಡಿದರು.
ಈಸ್ಟ್ ಬಲ್ಲರಾಟ್ ತಂಡದಲ್ಲಿ ಆಡಲು ಲಭ್ಯರಿದ್ದವರೇ 9 ಮಂದಿ. ಅದರಲ್ಲಿ ಮೊದಲೇ 2 ವಿಕೆಟ್ ಕಳೆದುಕೊಂಡಿದ್ದರು. ಬಳಿಕ ಕ್ಯಾರಿ ಅವರು ಒಂದೇ ಓವರ್ ನಲ್ಲಿ 6 ವಿಕೆಟ್ ಪಡೆದಿದ್ದು ಇನ್ನಿಂಗ್ಸ್ ಕೂಡ ಮುಗಿಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


