ಪರ್ಥ್: ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಡೇವಿಡ್ ಹಸ್ಸಿ ಹಠಾತ್ ವಿದಾಯ ಘೋಷಿಸಿದ್ದಾರೆ.
ಬಿಗ್ ಬಾಷ್ ಟಿ20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಡೇವಿಡ್ ಹಸ್ಸಿ ಪ್ರತಿನಿಧಿಸಿದ್ದ ಮೆಲ್ಬರ್ನ್ ಸ್ಟಾರ್ಸ್ ತಂಡ ಸೋಲು ಕಂಡ ಬೆನ್ನಲ್ಲೇ ಅವರು ಟ್ವೀಟರ್ ನಲ್ಲಿ ತಮ್ಮ ವಿದಾಯದ ನಿರ್ಧಾರವನ್ನು ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಪರ ಡೇವಿಡ್ ಹಸ್ಸಿ 69 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 1 ಶತಕ, 14 ಅರ್ಧಶತಕ ಸಿಡಿಸಿರುವ ಅವರು ಒಟ್ಟು 1796 ರನ್ ಗಳಿಸಿದ್ದಾರೆ. 39 ಟಿ20 ಪಂದ್ಯದಲ್ಲಿ 756 ರನ್ ಗಳಿಸಿದ್ದಾರೆ.