ಎಂಎಸ್ ಧೋನಿ ಸ್ಲೋ ಮೋಷನ್ ಸ್ಟಂಪಿಂಗ್ ವಿಡಿಯೋ ವೈರಲ್

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಭಿನ್ನ ಸ್ಟಂಪ್ ಗಳ ಮೂಲಕ ದಾಖಲೆಗಳನ್ನು ಬರೆದಿದ್ದಾರೆ...
ಎಂಎಸ್ ಧೋನಿ
ಎಂಎಸ್ ಧೋನಿ
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಭಿನ್ನ ಸ್ಟಂಪ್ ಗಳ ಮೂಲಕ ದಾಖಲೆಗಳನ್ನು ಬರೆದಿದ್ದಾರೆ. 
ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅತ್ಯಂತ ನಿಧಾನ ಗತಿಯಲ್ಲಿ ಸ್ಟಂಪ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ವಿಂಡೀಸ್ ಆಟಗಾರ ಹೋಲ್ಡರ್ ಕುಲ್ದೀಪ್ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಕ್ರೀಸ್ ನಿಂದ ಮುಂದೆ ಬಂದಿದ್ದಾರೆ. ಆದರೆ ಚೆಂಡು ಮಿಸ್ಸಾಗಿ ಧೋನಿ ಕೈಸೇರಿತು. ಹೋಲ್ಡರ್ ಕ್ರೀಸ್ ನಿಂದ ತುಂಬ ದೂರವಿದ್ದಿದ್ದರಿಂದ ಕ್ರೀಸ್ ಗೆ ಮರಳಲು ಯತ್ನಿಸಿಲ್ಲ. ಇನ್ನು ಚೆಂಡು ಕೈಸೇರುತ್ತಿದ್ದಂತೆ ಧೋನಿ ಸ್ಲೋ ಮೋಷನ್ ನಲ್ಲಿ ಸ್ಟಂಪ್ ಮಾಡಿ ಹೋಲ್ಡರನ್ನು ಔಟ್ ಮಾಡಿದರು. 
ಅತಿ ವೇಗದ ಸ್ಟಂಪಿಂಗ್ ಗಳಿಂದ ಹೆಸರುವಾಸಿಯಾಗಿದ್ದ ಧೋನಿ ಅವರು ಸ್ಲೋ ಮೋಷನ್ ಸ್ಟಂಪ್ ಮಾಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com