ಉಮೇಶ್ ಯಾದವ್ ರ 22 ನೇ ಓವರ್ ನಲ್ಲಿ ಸ್ಟೀವ್ ಸ್ಮಿತ್ ಎಲ್ಬಿಡಬ್ಲ್ಯೂ ಆದರು. ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಅಂಪೈರ್ ತೀರ್ಪಿಗೆ ಮೇಲ್ಮನವಿ ಸಲ್ಲಿಸಲು ಬಯಸಿದ್ದ ಸ್ಮಿತ್ ಮತ್ತೊಂದು ತುದಿಯಲ್ಲಿದ್ದ ಪೀಟರ್ ಹ್ಯಾಂಡ್ಸ್ ಕೂಂಬ್ ರ ಅಭಿಪ್ರಾಯ ಕೇಳಿದರು. ಇದಕ್ಕೆ ಪೀಟರ್ ನಾಟೌಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಕೂಡಲೇ ತಮ್ಮ ಡ್ರೆಸ್ಸಿಂಗ್ ಕೊಠಡಿಯತ್ತ ಸಂಕೇತ ರವಾನಿಸಿದ ಸ್ಮಿತ್ ಅಲ್ಲಿಂದ ಅಭಿಪ್ರಾಯ ಪಡೆಯಲು ಮುಂದಾದರು.